alex Certify VIRAL VIDEO: ಕ್ರಿಕೆಟ್​ ಮೈದಾನದಲ್ಲಿಯೇ ಯುವತಿಗೆ ಪ್ರಪೋಸ್​ ಮಾಡಿದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIRAL VIDEO: ಕ್ರಿಕೆಟ್​ ಮೈದಾನದಲ್ಲಿಯೇ ಯುವತಿಗೆ ಪ್ರಪೋಸ್​ ಮಾಡಿದ ಯುವಕ

ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ನೆದರ್ಲೆಂಡ್​ ನಡುವೆ ನಡೆದ ಭರ್ಜರಿ ಪಂದ್ಯದಲ್ಲಿ ಟೀಂ ಇಂಡಿಯಾ ಇತ್ತ ಗೆಲುವು ಕಂಡಿದ್ದರೆ, ಅತ್ತ ಕ್ರಿಕೆಟ್​ ಮೈದಾನದಲ್ಲಿಯೇ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಪ್ರೇಮ ಪ್ರಸ್ತಾವ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ ಐಸಿಸಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ.

ಭಾರತ ಮತ್ತು ನೆದರ್ಲೆಂಡ್​ ಪಂದ್ಯ ವೀಕ್ಷಿಸುತ್ತಿದ್ದ ಯುವತಿಯ ಬಳಿ ಯುವಕನೋರ್ವ ಬಂದು “ವಿಲ್ ಯು ಮ್ಯಾರಿ ಮಿ” (ನನ್ನನ್ನು ಮದುವೆಯಾಗುತ್ತೀಯಾ) ಎಂದು ಒಂದಲ್ಲ, ಮೂರು ಬಾರಿ ಕೇಳಿದ್ದಾನೆ. ಇದು ಮೊದಲೇ ಗೊತ್ತಿದ್ದಂತೆ ತೋರುತ್ತಿದ್ದ ಯುವತಿ, ನಗುತ್ತಾ “ಎಸ್” ಎಂದಿದ್ದಾಳೆ. ನಂತರ ಯುವಕ ಮಂಡಿಯೂರಿ ಪ್ರೀತಿಯ ಉಂಗುರ ತೊಡಿಸಿದ್ದಾನೆ.

ಇನ್ನು ಯುವಕ ಪ್ರಪೋಸ್ ಮಾಡುತ್ತಿದ್ದಂತೆ ಅಲ್ಲಿದ್ದ ಜನರು ಚಿಯರ್ ಮಾಡಿದ್ದಾರೆ. ಹುಡುಗಿ ನಾಚಿ ನೀರಾಗಿದ್ದನ್ನು ಈ ವಿಡಿಯೋದಲ್ಲಿ ಕಾಣಬಹುದು. ಬಳಿಕ ಆಕೆ ತನ್ನ ಪ್ರಿಯಕರನನ್ನು ಬಿಗಿದಪ್ಪಿಕೊಂಡು ತನ್ನ ಪ್ರೀತಿಯನ್ನು ತೋರ್ಪಡಿಸುತ್ತಾಳೆ. ಈ ವಿಡಿಯೋ ನೋಡಿದ ಹಲವಾರು ಮಂದಿ ಜೋಡಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...