alex Certify ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಯ್ತು ಬಾಲಕನ ಹಾಡು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಯ್ತು ಬಾಲಕನ ಹಾಡು..!

ಬಾಲಕನೊಬ್ಬ ಹಾಡಿರುವ ಬಚ್ ಪನ್ ಕಾ ಪ್ಯಾರ್ ಹಾಡು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಗೊತ್ತಿರುವ ಸಂಗತಿ. ಇದೀಗ ಈ ಹಾಡು ರಾಷ್ಟ್ರದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಬ್ಬಿದ್ದು, ಸಖತ್ ವೈರಲ್ ಆಗಿದೆ.

ಬಾಲಕನೊಬ್ಬ ಹಿಂದಿ ಹಾಡು ಬಚ್ ಪನ್ ಕಾ ಪ್ಯಾರ್ ಅನ್ನು ಹಾಡಿದ್ದು, ಇದನ್ನು ಅಲ್ಲಿದ್ದ ಶಿಕ್ಷಕರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು. ಇದಕ್ಕೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 5 ಮಿಲಿಯನ್ ಲೈಕ್ ಪಡೆದಿದೆ. ಹಲವಾರು ಮಂದಿ ಈತನ ಹಾಡನ್ನು ಪೋಸ್ಟ್ ಮಾಡುವ ಮುಖಾಂತರ ಪ್ರೋತ್ಸಾಹ ನೀಡಿದ್ದಾರೆ.

‌ʼವಾಟ್ಸಾಪ್ʼ ಅರ್ಕೈವ್​ ಚಾಟ್​​ ಆಯ್ಕೆ ಕುರಿತಂತೆ ಬಂತು ಬಳಕೆದಾರರ ಬಹುಬೇಡಿಕೆಯ ಈ ಹೊಸ ವೈಶಿಷ್ಟ್ಯ..!

ಸದ್ಯ ವೈರಲ್ ಆಗಿರುವ ವಿಡಿಯೋ ವನ್ನು ಸೆಲೆಬ್ರಿಟಿಗಳು ಕೂಡ ಇಷ್ಟಪಟ್ಟಿದ್ದಾರೆ. ರ್ಯಾಪರ್ ಬಾದ್ ಶಾ ಕೂಡ ರೀಮಿಕ್ಸ್ ಆವೃತ್ತಿಗೆ ಸೇರಿಕೊಂಡಿದ್ದು, ಈ ಬಾಲಕ ಹಾಡಿರುವ ವಿಡಿಯೊವನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಆಗಿದೆ. ಅಮೆರಿಕಾದ ರಿಕ್ಕಿ ಪಾಂಡ್ ಬಾಲಕನ ಹಾಡಿಗೆ ಸ್ಟೆಪ್ ಹಾಕಿ, ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ‘’ನಾನು ಏನು ಮಾಡಿದ್ದೇನೆ ಎಂದು ನನಗೆ ಗೊತ್ತಿಲ್ಲ. ಮೋಜಿಗಾಗಿ ಮಾಡಿದ್ದೇನೆ’’ ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ.

ಸದ್ಯ ರಿಕ್ಕಿ ಪಾಂಡ್ ಪೋಸ್ಟ್ ಗೆ ನೆಟ್ಟಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. 84 ಸಾವಿರಕ್ಕೂ ಹೆಚ್ಚು ಲೈಕ್ ಗಳು ಬಂದಿದ್ದು, ಮತ್ತಷ್ಟು ಸ್ಟೆಪ್ಸ್ ಹಾಕಿ ಅಂತೆಲ್ಲಾ ಕೇಳಿಕೊಂಡಿದ್ದಾರೆ.

https://www.youtube.com/watch?v=8nDqVaypn3g

https://www.youtube.com/watch?v=S68800ni4XU

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...