alex Certify Watch | ಜಗತ್ತಿನ ಗಮನ ಸೆಳೆದ ಪಾಕ್​ ಯುವತಿಯ ಬಾಲಿವುಡ್​ ನೃತ್ಯ: ಫ್ರಾನ್ಸ್​ ಬಾಲಕಿಯಿಂದಲೂ ಅನುಕರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch | ಜಗತ್ತಿನ ಗಮನ ಸೆಳೆದ ಪಾಕ್​ ಯುವತಿಯ ಬಾಲಿವುಡ್​ ನೃತ್ಯ: ಫ್ರಾನ್ಸ್​ ಬಾಲಕಿಯಿಂದಲೂ ಅನುಕರಣೆ

ಕರಾಚಿ: ಪಾಕಿಸ್ತಾನಿ ಹುಡುಗಿ ಆಯೇಷಾ ಬಾಲಿವುಡ್​ ಹಾಡಿಗೆ ನರ್ತಿಸಿರುವುದು ಭಾರಿ ವೈರಲ್​ ಆಗಿದ್ದು, ಈಕೆ ಭಾರಿ ಸುದ್ದಿಯಲ್ಲಿಯೂ ಇದ್ದಾಳೆ. ಲಾಹೋರ್​ನ 18 ವರ್ಷದ ಆಯೇಷಾಳ ನೃತ್ಯ ಎಲ್ಲೆಡೆ ಹರಿದಾಡುತ್ತಿರುವ ನಡುವೆಯೇ ಈಕೆ ನೃತ್ಯ ಮಾಡಿದ ಹಾಡಿಗೆ ಭಾರಿ ಬೇಡಿಕೆಯೂ ಬಂದುಬಿಟ್ಟಿದೆ.

ಆಯೇಷಾ ಲತಾ ಮಂಗೇಶ್ಕರ್ ಅವರ ಸೂಪರ್​ ಹಿಟ್ ಹಾಡು ‘ಮೇರಾ ದಿಲ್ ಯೆ ಪುಕರೆ’ ಹಾಡಿಗೆ ನೃತ್ಯ ಮಾಡಿದ್ದಳು. ಇದು ಭಾರತ ಮಾತ್ರವಲ್ಲ, ಬೇರೆ ಬೇರೆ ದೇಶಗಳ ನೃತ್ಯಪ್ರಿಯರನ್ನೂ ಸೆಳೆದಿದೆ. ಇದೀಗ ಅದೇ ರೀಮಿಕ್ಸ್ ಆವೃತ್ತಿಗೆ ಹಲವರು ಹೆಜ್ಜೆ ಹಾಕುತ್ತಿದ್ದು, ಫ್ರಾನ್ಸ್‌ನ ಪುಟ್ಟ ಹುಡುಗಿ ಈ ಹಾಡಿಗೆ ತನ್ನ ಅಭಿನಯದ ಮೂಲಕ ಹೃದಯವನ್ನು ಗೆದ್ದಿದ್ದಾಳೆ.

ಪುಟ್ಟ ಬಾಲಕಿ ರೇನಾ ಮಾಡಿದ ನೃತ್ಯದ ವಿಡಿಯೋವನ್ನು ಖುದ್ದು ಆಯೇಷಾ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾಳೆ. ಫ್ರಾನ್ಸ್‌ನ ಬೀದಿಗಳಲ್ಲಿ ಮೇರಾ ದಿಲ್ ಯೇ ಪುಕಾರೆಗೆ ನೃತ್ಯ ಮಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಬಾಲಕಿ, ಆಯೇಷಾಳ ಹೆಜ್ಜೆಗಳನ್ನು ಅನುಕರಿಸಲು ಪ್ರಯತ್ನಿಸಿರುತ್ತಿರುವುದನ್ನು ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...