alex Certify ‘ವಿಕ್ರಮ್’ ಟು ‘ಚಾರ್ಲಿ 777’ : OTT ಯಲ್ಲಿ ಪ್ರಸಾರವಾಗಲಿವೆ ಐದು ಅದ್ಭುತ ಸಿನಿಮಾಗಳು..! ಇಲ್ಲಿದೆ ಅದರ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಿಕ್ರಮ್’ ಟು ‘ಚಾರ್ಲಿ 777’ : OTT ಯಲ್ಲಿ ಪ್ರಸಾರವಾಗಲಿವೆ ಐದು ಅದ್ಭುತ ಸಿನಿಮಾಗಳು..! ಇಲ್ಲಿದೆ ಅದರ ವಿವರ

ಸಾಂಕ್ರಾಮಿಕ ರೋಗದ ನಂತರ ಜನರು ಥಿಯೇಟರ್ ಗಳಿಗೆ ಹೋಗಿ ಸಿನಿಮಾ ವೀಕ್ಷಿಸುವುದು ಸ್ವಲ್ಪಮಟ್ಟಿಗೆ ಕಡಿಮೆಯಾಗಿರಬಹುದು. ಇವಾಗೆಲ್ಲಾ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಓಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ಸಿನಿಮಾ ಲಭ್ಯವಿರುತ್ತದೆ.

ಹೀಗಾಗಿ ಥಿಯೇಟರ್ ಗೆ ಹೋಗಿ ನೋಡಲಾಗದವರು ಮನೆಯಲ್ಲೇ ಚಿತ್ರವನ್ನು ವೀಕ್ಷಿಸಬಹುದು. ಇದಕ್ಕೆಂದೇ ವೂಟ್, ನೆಟ್ ಫ್ಲಿಕ್, ಅಮೆಜಾನ್ ಪ್ರೈಮ್ ಮುಂತಾದ ಫ್ಲಾಟ್ ಫಾರ್ಮ್ ಗಳಿವೆ. ಇದೀಗ ಐದು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳು ಓಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಯಾವ್ಯಾವ ಸಿನಿಮಾ ಬನ್ನಿ ನೋಡೋಣ.

1. ವಿಕ್ರಮ್ ಚಿತ್ರ

ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರವು ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದ್ದು, ಇದೀಗ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿಯೂ ಬಿಡುಗಡೆಯಾಗಿದೆ. ಜುಲೈ 8, 2022 ರಂದು ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ತಮಿಳು, ಕನ್ನಡ, ಹಿಂದಿ, ತೆಲುಗು ಮತ್ತು ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ಚಲನಚಿತ್ರ ಮೂಡಿಬಂದಿದೆ.

Vikram

2. ಘೋಸ್ಟ್

ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅಭಿನಯದ ಘೋಸ್ಟ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಲಭ್ಯವಿದೆ. ಕಾಜಲ್ ಅಗರ್ವಾಲ್ ಮತ್ತು ಸೋನಾಲ್ ಚೌಹಾನ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾವನ್ನು ಪ್ರವೀಣ್ ಸತ್ತಾರು ನಿರ್ದೇಶಿಸಿದ್ದಾರೆ.

ಚಲನಚಿತ್ರದ ಬಿಡುಗಡೆ ದಿನಾಂಕ ಮತ್ತು ಯಾವ ಓಟಿಟಿ ಪ್ಲಾಟ್‌ಫಾರ್ಮ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಬಗ್ಗೆ ನಿರ್ಮಾಪಕರು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ.

The Ghost

3. ಇಂದಿರಾ

ಅನಿತಾ ಭಟ್, ನೀತು ಶೆಟ್ಟಿ, ಚಕ್ರವರ್ತಿ ಮತ್ತು ರೆಹಮಾನ್ ಹಾಸನ್ ಅಭಿನಯದ ಕನ್ನಡ ಚಿತ್ರ ಇಂದಿರಾ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರದ ಮುಖ್ಯ ಪಾತ್ರವು ಹೆಂಡತಿ ಕುರುಡಳಾಗಿದ್ದು, ಅವಳು ನೆನಪಿನ ಶಕ್ತಿ ಕಳೆದುಕೊಂಡಿದ್ದಾಳೆ ಮತ್ತು ತನ್ನ ಗಂಡನ ಸಾವಿಗೆ ಸಾಕ್ಷಿಯಾಗಿದ್ದಾಳೆ. ಜುಲೈ 9 ರಂದು, ಚಲನಚಿತ್ರವು ನೇರವಾಗಿ ವೂಟ್‌ನಲ್ಲಿ ಬಿಡುಗಡೆಯಾಯಿತು.

Kannada film Indira gets an OTT release

4. ಚಾರ್ಲಿ

ಕನ್ನಡದ ನಟ ರಕ್ಷಿತ್ ಶೆಟ್ಟಿ ಒಳಗೊಂಡಿರುವ ಅದ್ಭುತ ಚಲನಚಿತ್ರ 777 ಚಾರ್ಲಿ ಸಹ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ. ಮನುಷ್ಯ ಮತ್ತು ನಾಯಿಯ ನಡುವಿನ ಸಂಬಂಧವೇ ಈ ಚಿತ್ರದ ಕಥೆ. ಜುಲೈ 29 ರಂದು, ಚಲನಚಿತ್ರವು ವೂಟ್ ನಲ್ಲಿ ಲಭ್ಯವಾಗಲಿದೆ.

777 Charlie

5. ಮಾಡರ್ನ್ ಲವ್ ಹೈದರಾಬಾದ್

ಮಾಡರ್ನ್ ಲವ್ ಹೈದರಾಬಾದ್ ನಲ್ಲಿ ನೆಲೆಗೊಂಡಿರುವ ಆರು ವಿಶಿಷ್ಟ ಮತ್ತು ವೈವಿಧ್ಯಮಯ ಪ್ರೇಮಕಥೆಗಳನ್ನು ಆಧರಿಸಿದೆ. ಇದು ಕೋಮಲಿ ಪ್ರಸಾದ್, ರೇವತಿ, ನಿತ್ಯಾ ಮೆನೆನ್, ಮತ್ತು ವಿ.ಕೆ ಸೇರಿದಂತೆ ಹಲವಾರು ತೆಲುಗು ನಟರನ್ನು ಒಳಗೊಂಡಿದೆ. ಇದು ಜುಲೈ 8 ರಂದು, ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿರುತ್ತದೆ.

 Modern Love Hyderabad

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...