alex Certify ಈ ಹಕ್ಕಿ ಅನುಕರಿಸುವ ಶಬ್ದ ಕೇಳಿದ್ರೆ ನೀವು ಬೆಕ್ಕಸಬೆರಗಾಗೋದು ಗ್ಯಾರಂಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಕ್ಕಿ ಅನುಕರಿಸುವ ಶಬ್ದ ಕೇಳಿದ್ರೆ ನೀವು ಬೆಕ್ಕಸಬೆರಗಾಗೋದು ಗ್ಯಾರಂಟಿ..!

ಹಕ್ಕಿಗಳ ಕಲರವ ಮನಸ್ಸಿಗೆ ಮುದ ನೀಡುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಸಿಡ್ನಿಯ ಮೃಗಾಲಯದಲ್ಲಿರುವ ಲೈರ್​​ಬರ್ಡ್​ ಎಂಬ ಹಕ್ಕಿಯು ಕೂಗುವ ಸದ್ದನ್ನು ಕೇಳಿದ್ರೆ ನೀವೊಮ್ಮೆ ಬೆಕ್ಕಸ ಬೆರಗಾಗೋದು ಗ್ಯಾರಂಟಿ. ಏಕೆಂದರೆ ಈ ಹಕ್ಕಿಯು ಥೇಟ್​​ ಮಗುವಿನ ಅಳುವಿನಂತೆಯೇ ಸೌಂಡ್​ನ್ನು ಹೊರಡಿಸುತ್ತವೆ.‌

ಎಕೋ ಎಂಬ ಹೆಸರಿನ ಈ ಹಕ್ಕಿಯು ಕೊರೊನಾ ಲಾಕ್​ ಡೌನ್​ ಸಂದರ್ಭದಲ್ಲಿ ಈ ಎಲ್ಲಾ ಚಾಕಚಕ್ಯತೆಯನ್ನು ಕಲಿತಿದೆ ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿಡ್ನಿಯಲ್ಲಿರುವ ಟರೊಂಗಾ ಮೃಗಾಲಯದಲ್ಲಿರುವ 7 ವರ್ಷದ ಗಂಡು ಲೈರ್​ ಹಕ್ಕಿಯು ವಿಶಿಷ್ಟ ಧ್ವನಿಯನ್ನು ಹೊರಹಾಕುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದೆ.

ಇವು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ಈ ಧ್ವನಿಯನ್ನು ಕಲಿತಿರಬಹುದು ಎಂದು ಮೃಗಾಲಯದ ಪಕ್ಷಿ ಘಟಕದ ಮೇಲ್ವಿಚಾರಕ ಲಿಯಾನ್​ ಗೊಲೆಬಿಯೋವ್ಸ್ಕಿ ಹೇಳಿದ್ದಾರೆ. ಮಗುವಿನ ಅಳುವಿನ ಶಬ್ದದ ಜೊತೆಗೆ ಇದು ಫೈರ್​ ಅಲರಾಂ ಸೌಂಡ್​ನ್ನೂ ಅನುಕರಿಸುವ ಸಾಮರ್ಥ್ಯ ಹೊಂದಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...