alex Certify ರೈಲ್ವೆ ಹಳಿ ಮೇಲೆ ವಿಡಿಯೋ ಮಾಡುವಾಗಲೇ ಬಂದೆರಗಿತ್ತು ಸಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಹಳಿ ಮೇಲೆ ವಿಡಿಯೋ ಮಾಡುವಾಗಲೇ ಬಂದೆರಗಿತ್ತು ಸಾವು…!

ಯುವಕರಿಬ್ಬರು ಮೊಬೈಲ್ ಮೂಲಕ ರೈಲು ಹಳಿ ಮೇಲೆ ವಿಡಿಯೋ ಮಾಡುತ್ತಿರುವಾಗ ದುರಂತ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ರೈಲು ಹರಿದ ಪರಿಣಾಮ ಈ ಘಟನೆ ಸಂಭವಿಸಿದೆ.

ಫೆಬ್ರವರಿ 22ರಂದು ನವದೆಹಲಿಯ ಕಾಂತಿನಗರ್ ಫ್ಲೈ ಓವರ್ ಬಳಿ ಈ ಘಟನೆ ನಡೆದಿದ್ದು, ಬಿ ಟೆಕ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ವಂಶ್ ಶರ್ಮಾ ಹಾಗೂ ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ 20 ವರ್ಷದ ಮೋನು ಸಾವನ್ನಪ್ಪಿದವರಾಗಿದ್ದಾರೆ.

ಇವರಿಬ್ಬರು ಈ ಮೊದಲಿನಿಂದಲೂ ರೈಲು ಹಳಿಗಳ ಬಳಿ ಲೈವ್ ವಿಡಿಯೋ ಮಾಡುವ ಅಭ್ಯಾಸ ಹೊಂದಿದ್ದರು ಎನ್ನಲಾಗಿದ್ದು, ಇದೇ ರೀತಿ ಗುರುವಾರ ಸಂಜೆಯೂ ಸಹ ತೆರಳಿದ್ದಾರೆ. ಆದರೆ ವೇಗವಾಗಿ ಬಂದ ರೈಲು ಇವರ ಮೇಲೆ ಹರಿದ ಪರಿಣಾಮ ಸಾವಿಗೀಡಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...