alex Certify Watch Video | ಚಲಿಸುತ್ತಿದ್ದ ರೈಲು ಹತ್ತಲು ಮುಗಿಬಿದ್ದ ಮಹಿಳೆಯರು; ಮುಂಬೈ ಜೀವನ ಕಂಡು ಹೌಹಾರಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಚಲಿಸುತ್ತಿದ್ದ ರೈಲು ಹತ್ತಲು ಮುಗಿಬಿದ್ದ ಮಹಿಳೆಯರು; ಮುಂಬೈ ಜೀವನ ಕಂಡು ಹೌಹಾರಿದ ನೆಟ್ಟಿಗರು

ಮುಂಬೈ ಜನರಿಗೆ ರೈಲುಗಳು ಒಂದು ರೀತಿಯಲ್ಲಿ ಜೀವನಾಡಿ ಇದ್ದಂತೆ. ಕೆಲವೊಂದು ಸಂದರ್ಭದಲ್ಲಂತೂ ರೈಲ್ವೆ ನಿಲ್ದಾಣಗಳಲ್ಲಿ ಯಾವ ರೀತಿ ಜನಸಂದಣಿ ಇರುತ್ತೆ ಅಂದ್ರೆ ಅದನ್ನ ಊಹಿಸೋಕೂ ಸಾಧ್ಯವಿಲ್ಲ. ಇದೇ ಮಾದರಿಯ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ.

ಎಲ್ಲಾ ಸುರಕ್ಷತಾ ಕಾಳಜಿಯನ್ನು ಮೂಲೆಗೆ ತಳ್ಳಿ ಚಲಿಸುತ್ತಿದ್ದ ಮುಂಬೈ ಟ್ರೈನ್​ ಹತ್ತಲು ಮಹಿಳೆಯರು ಮುನ್ನುಗ್ಗುತ್ತಿರೋ ವಿಡಿಯೋ ಸಖತ್​ ವೈರಲ್​ ಆಗಿದೆ. ಅಂದಹಾಗೆ ಮುಂಬೈನಲ್ಲಿ ಇದು ದಿನನಿತ್ಯದ ಕತೆಯಾಗಿದ್ದರೂ ಸಹ ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈಗ ಎಕ್ಸ್​ ಎಂದು ಬದಲಾಗಿರುವ ಟ್ವಿಟರ್​ ಆ್ಯಪ್​ನಲ್ಲಿ ಅಕ್ಷಯ್​ ಎಂಬವರು ಈ ವಿಡಿಯೋವನ್ನು ಶೇರ್​ ಮಾಡಿದ್ದು ಲಕ್ಷಗಟ್ಟಲೇ ವೀವ್ಸ್​ ಸಂಪಾದಿಸಿದೆ. ಈ ವಿಡಿಯೋದಲ್ಲಿ ಚಲಿಸುತ್ತಿರುವ ರೈಲು ಹತ್ತಲು ಮಹಿಳೆಯರು ಯತ್ನಿಸುತ್ತಿರೋದನ್ನ ಕಾಣಬಹುದಾಗಿದೆ.

ನಿಮಗೆ ಈ ದೃಶ್ಯಗಳನ್ನ ನೋಡಿ ಆಶ್ಚರ್ಯ, ಭಯ ಎಲ್ಲವೂ ಆಗಬಹುದು. ಆದರೆ ಮುಂಬೈನಲ್ಲಿ ಶ್ರೀಮಂತರು ಆರಾಮದಾಯಕವಾಗಿ ಸೌತ್ ಮುಂಬೈನಲ್ಲಿ ವಾಸವಿದ್ದಾರೆ. ಆದರೆ ಸಾಮಾನ್ಯ ವರ್ಗದ ಮುಂಬೈಕರ್​ಗಳ ಜೀವನ ಇದೇ. ಇವರ ಬಳಿ ನೀವು ಉತ್ತಮ ಮೂಲಸೌಕರ್ಯಗಳ ಬಗ್ಗೆ ಕೇಳಬೇಡಿ ಅಂತಾ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ದೇಶದ ಆರ್ಥಿಕತೆಗೆ ಮುಂಬೈ ಬಹುದೊಡ್ಡ ಕೊಡುಗೆ ನೀಡಿದೆ. ಆದರೆ ಮೂಲಸೌಕರ್ಯಗಳ ವಿಚಾರದಲ್ಲಿ ಮುಂಬೈ ಅದ್ಯಾವಾಗ ಪ್ರಗತಿ ಕಾಣುತ್ತೋ ಅಂತಾ ಅನೇಕರು ಕಮೆಂಟ್​ನಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...