alex Certify ಗಾಲಿ ಕುರ್ಚಿಯಲ್ಲಿ ಸ್ವಿಗ್ಗಿ ಪ್ರತಿನಿಧಿಯಿಂದ ಫುಡ್​ ಡೆಲಿವರಿ; ಯುವತಿಯ ಆತ್ಮವಿಶ್ವಾಸಕ್ಕೆ ನೆಟ್ಟಿಗರ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಲಿ ಕುರ್ಚಿಯಲ್ಲಿ ಸ್ವಿಗ್ಗಿ ಪ್ರತಿನಿಧಿಯಿಂದ ಫುಡ್​ ಡೆಲಿವರಿ; ಯುವತಿಯ ಆತ್ಮವಿಶ್ವಾಸಕ್ಕೆ ನೆಟ್ಟಿಗರ ಮೆಚ್ಚುಗೆ

ಇದೊಂದು ಪ್ರೇರಣದಾಯಕ ಸುದ್ದಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ, ಗಾಲಿಕುರ್ಚಿಯಲ್ಲಿ ಸ್ವಿಗ್ಗಿ ಪ್ರತಿನಿಧಿಯೊಬ್ಬರು ಫುಡ್​ ಡೆಲವರಿ ಮಾಡುವುದನ್ನು ಕಾಣಬಹುದು.

ವಿಶೇಷ ಸಾಮರ್ಥ್ಯವುಳ್ಳ ಯುವತಿಯೊಬ್ಬರು ಗಾಲಿ ಕುರ್ಚಿಯಲ್ಲಿ ಆಹಾರವನ್ನು ತಲುಪಿಸುತ್ತಿರುವುದನ್ನು ಕಾಣಬಹುದು. ಇದನ್ನು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್​ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಆಕೆಯ ಹಿಂದೆ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು 6 ಸೆಕೆಂಡುಗಳ ಕ್ಲಿಪ್​ ಅನ್ನು ರೆಕಾರ್ಡ್​ ಮಾಡಿದ್ದಾರೆ. ಆಕೆಯ ಸಮವಸ್ತ್ರ ಮತ್ತು ಬ್ಯಾಗ್​ನಲ್ಲಿರುವ ಲೋಗೋ ಪ್ರಕಾರ, ಡೆಲಿವರಿ ಏಜೆಂಟ್​ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದಾರೆಂಬುದು ಸ್ಪಷ್ಟ.

ಖಂಡಿತ ಜೀವನವು ಕಷ್ಟಕರವಾಗಿದೆ, ಆದರೆ ನಾವು ಸೋಲನ್ನು ಒಪ್ಪಿಕೊಳ್ಳಲು ಕಲಿತಿಲ್ಲ. ಎಂದು ಕ್ಲಿಪ್​ ಅನ್ನು ಹಂಚಿಕೊಳ್ಳುವಾಗ ಸ್ವಾತಿ ಮಲಿವಾಲ್​ ಬರೆದುಕೊಂಡಿದ್ದಾರೆ.

ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ನಂತರ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನೆಟ್ಟಿಗರು ಆ ಯುವತಿಯ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ ಮತ್ತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...