alex Certify ಮೈನಸ್​ 40 ಡಿಗ್ರಿಯಲ್ಲಿ ಭಾಂಗ್ರಾ ನೃತ್ಯ; ವೈರಲ್ ವಿಡಿಯೋಗೆ ಭಾರಿ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈನಸ್​ 40 ಡಿಗ್ರಿಯಲ್ಲಿ ಭಾಂಗ್ರಾ ನೃತ್ಯ; ವೈರಲ್ ವಿಡಿಯೋಗೆ ಭಾರಿ ಮೆಚ್ಚುಗೆ

ಚಳಿಗಾಲ ಎಂದಾಕ್ಷಣ ಎಷ್ಟೋ ಮಂದಿಗೆ ಮೈ ಝುಂ ಎನ್ನುತ್ತದೆ. ಆದರೆ ಮೈನಸ್​ ಡಿಗ್ರಿಯಲ್ಲಿ ವಾಸಿಸುವವರ ಕಥೆ ಹೇಗಿರಬೇಡ? ಆದರೆ ಇಲ್ಲೊಬ್ಬ ನೃತ್ಯಗಾರ ಇದೇ ಕೊರೆಯುವ ಚಳಿಯಲ್ಲಿ ನರ್ತಿಸಿ ವೈರಲ್​ ಆಗಿದ್ದಾರೆ. ಅದೂ ಎಷ್ಟು ಡಿಗ್ರಿ ಅಂತೀರಾ ಮೈನಸ್​ 40 ಡಿಗ್ರಿ!

ಹೌದು. ಕೆನಡಾದ ಪ್ರಭಾವಿ ಗುರುದೀಪ್ ಪಂಧೆರ್ ಅವರು ಭಾಂಗ್ರಾ ನೃತ್ಯವನ್ನು ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಇದನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

“ಇಲ್ಲಿ ಮೈನಸ್ 40 ಡಿಗ್ರಿ ಇದೆ. ಯುಕಾನ್ ಅರಣ್ಯದಲ್ಲಿ ನಾನು ಈ ಕೊರೆಯುವ ಚಳಿಯಲ್ಲಿ ನೃತ್ಯ ಮಾಡುತ್ತಿದ್ದೇನೆ. ಇದರಿಂದ ನನಗೆ ಸಂತೋಷ ಮತ್ತು ಸಕಾರಾತ್ಮಕತೆ ಸಿಗುತ್ತಿದೆ” ಎಂದು ಹೇಳುವ ಮೂಲಕ ಗುರುದೀಪ್​ ಭಾಂಗ್ರಾ ನೃತ್ಯ ಮಾಡಿದ್ದಾರೆ. 56 ಸೆಕೆಂಡುಗಳ ಈ ವಿಡಿಯೋಗೆ ಹಲವಾರು ಮೆಚ್ಚುಗೆಗಳು ವ್ಯಕ್ತವಾಗಿವೆ.

ಚಳಿಯನ್ನು ಓಡಿಸಲು ಇದಕ್ಕಿಂತ ಬೇರೆ ಮಾರ್ಗ ಇಲ್ಲ ಎಂದು ಹಲವರು ಕಮೆಂಟಿಗರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...