alex Certify BIG NEWS: ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದ್ದ ವರುಣ್ ಗಾಂಧಿ ರಾಜೀನಾಮೆಗೆ ಸ್ವಪಕ್ಷೀಯ ಸಂಸದರಿಂದಲೇ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದ್ದ ವರುಣ್ ಗಾಂಧಿ ರಾಜೀನಾಮೆಗೆ ಸ್ವಪಕ್ಷೀಯ ಸಂಸದರಿಂದಲೇ ಆಗ್ರಹ

ನವದೆಹಲಿ: ಭಾನುವಾರ (ಡಿಸೆಂಬರ್ 5) ಲಕ್ನೋದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಆರೋಪದ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ತಮ್ಮದೇ ಪಕ್ಷದ ನಾಯಕ ವರುಣ್ ಗಾಂಧಿ ಟೀಕಿಸಿದ್ದರು. ಇದಕ್ಕೆ ಬಿಜೆಪಿಯ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್ ಅವರು ವರುಣ್ ಗಾಂಧಿ ಮೇಲೆ ಕಿಡಿಕಾರಿದ್ದು, ಅವರು ಕಾಂಗ್ರೆಸ್ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವರುಣ್ ಗಾಂಧಿ ಅವರು ಕಾಂಗ್ರೆಸ್ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಅವರಲ್ಲಿ ನೈತಿಕತೆ ಉಳಿದಿದ್ದರೆ ಅಥವಾ ಬಿಜೆಪಿ ವಿರುದ್ಧ ಮಾತನಾಡುವ ಮನಸ್ಸು ಮಾಡಿದ್ದರೆ ಮತ್ತು ಕಾಂಗ್ರೆಸ್ ಅಥವಾ ಬೇರೆಡೆಗೆ ಹೋಗಲು ಬಯಸಿದರೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಯಾದವ್ ಆಗ್ರಹಿಸಿದ್ದಾರೆ.

ರೈಲ್ವೇ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಕುರಿತು ಇಲ್ಲಿದೆ ವಿವರ

ವರುಣ್ ಗಾಂಧಿ ಪಕ್ಷದ ಘನತೆ ಮತ್ತು ಶಿಸ್ತನ್ನು ಗೌರವಿಸಬೇಕು. ಅವರು ಬಿಜೆಪಿಯಲ್ಲಿರುವಾಗ ಬಿಜೆಪಿಯ ಶಿಸ್ತನ್ನು ಅನುಸರಿಸಬೇಕು ಎಂದು ಯಾದವ್ ಹೇಳಿದ್ದಾರೆ.

ಆಪಾದಿತ ಲಾಠಿ ಚಾರ್ಜ್‌ನ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದ ವರುಣ್ ಗಾಂಧಿ, ಇದೊಂದು ಅನಾಗರಿಕ ಲಾಠಿ ಚಾರ್ಜ್ ಎಂದು ಟೀಕಿಸಿದ್ದರು. ಅಲ್ಲದೆ ಅವರು ನಿಮ್ಮ ಮಕ್ಕಳಾಗಿದ್ದಲ್ಲಿ ಈ ರೀತಿ ಮಾಡುತ್ತಿದ್ರಾ ಎಂದು ಪ್ರಶ್ನಿಸಿದ್ದಾರೆ. ನಿಮ್ಮಲ್ಲಿ ಖಾಲಿ ಹುದ್ದೆಗಳಿವೆ ಮತ್ತು ಅರ್ಹ ಅಭ್ಯರ್ಥಿಗಳು ಕೂಡ ಇದ್ದಾರೆ. ಹಾಗಾದರೆ ನೀವು ಏಕೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ? ಎಂದು ವರುಣ್ ಗಾಂಧಿ ಪ್ರಶ್ನಿಸಿದ್ದರು

ಶನಿವಾರದಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಶಿಕ್ಷಕರ ನೇಮಕಾತಿ ವಿಚಾರ ಕುರಿತು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಯುಪಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...