alex Certify ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ ಜಾನ್ವಿ ಕಪೂರ್​, ವರುಣ್​ ಧವನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ ಜಾನ್ವಿ ಕಪೂರ್​, ವರುಣ್​ ಧವನ್​

ಬಾಲಿವುಡ್​ ನಟ ವರುಣ್​ ಧವನ್​ ಹಾಗೂ ಜಾನ್ವಿ ಕಪೂರ್ ಶೀಘ್ರದಲ್ಲಿಯೇ ಬವಾಲ್​ ಸಿನಿಮಾದಲ್ಲಿ ಒಟ್ಟಾಗಿ ತೆರೆ ಮೇಲೆ ಬರಲಿದ್ದಾರೆ. ಈ ಸಿನಿಮಾ ಜುಲೈ 21ರಂದು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಲಿದೆ.

ಸಿನಿಮಾ ರಿಲೀಸ್​ಗೂ ಮುನ್ನ ವರುಣ್​ ಹಾಗೂ ಜಾನ್ವಿ ಸಿನಿಮಾ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಿನಿಮಾ ತಂಡ ದಿಲ್​ ದೇ ದಿಲ್​ ತಕ್​ ಬಿಡುಗಡೆ ಮಾಡಿದೆ. ವರುಣ್​ ಹಾಗೂ ಜಾನ್ವಿ ಇದರಲ್ಲಿ ಸಖತ್​ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ವರುಣ್​ ಧವನ್​, ಇದು ನನಗೆ ಅತ್ಯಂತ ರೋಮಾಂಚನಕಾರಿ ಹಾಗೂ ಲಾಭದಾಯಕ ಪಾತ್ರವಾಗಿದೆ. ಇದೊಂದು ಸವಾಲಿನ ಪ್ರಯಾಣ ಕೂಡ ಹೌದು. ಅಜ್ಜು ಹಾಗೂ ನಿಶಾರ ಪ್ರಣಯ ಕತೆ ಪ್ರಪಂಚಾದ್ಯಂತ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

ನಟಿ ಜಾನ್ವಿ ಕಪೂರ್​ ಕೂಡ ಈ ವಿಚಾರವಾಗಿ ಮಾತನಾಡಿದ್ದು, ನಾವು ನಮಗೆ ಸಿಕ್ಕ ಪಾತ್ರಗಳಿಗೆ ಹೊಂದಿಕೊಳ್ಳುತ್ತೇವೆ. ಈ ಸಿನಿಮಾದಲ್ಲಿ ನಿಶಾ ಪಾತ್ರವು ಸಾಕಷ್ಟು ಕನಸುಗಳನ್ನು ಹೊತ್ತ ಸರಳ ಯುವತಿಯ ಪಾತ್ರವಾಗಿದೆ. ಬವಾಲ್​ನಲ್ಲಿ ನಿಶಾಳ ಜೀವನ, ಅವಳ ಪ್ರೀತಿ ಎಲ್ಲವೂ ಪ್ರೇಕ್ಷಕರಿಗೆ ಹತ್ತಿರ ಎನಿಸಲಿದೆ ಎಂದಿದ್ದಾರೆ.

ಅಶ್ವಿನಿ ಅಯ್ಯರ್​ ತಿವಾರಿ ಹಾಗೂ ನಿತೇಶ್​ ತಿವಾರಿ ಅರ್ಥ್​ಸ್ಕಿ ಪಿಕ್ಚರ್ಸ್​ ಸಹಯೋಗದಲ್ಲಿ ಸಾಜಿದ್​ ನಾಡಿಯಾಡ್​ವಾಲಾರ ನಾಡಿಯಾಡ್​​ವಾಲಾ ಗ್ರ್ಯಾಂಡ್​​ಸನ್​ ಎಂಟರ್​ಟೈನ್​ಮೆಂಟ್​ ಈ ಸಿನಿಮಾವನ್ನು ನಿರ್ಮಿಸಿದ್ದು , ನಿತೇಶ್​ ತಿವಾರಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಪ್ರೈಮ್​ ವಿಡಿಯೋದಲ್ಲಿ ಜುಲೈ 21ರಂದು ರಿಲೀಸ್​ ಆಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...