alex Certify BIG NEWS: ‘ಚಾರ್​​​ ಧಾಮ್’​ ಯಾತ್ರೆ ಕುರಿತು ಉತ್ತರಾಖಂಡ್​ ಸರ್ಕಾರದಿಂದ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಚಾರ್​​​ ಧಾಮ್’​ ಯಾತ್ರೆ ಕುರಿತು ಉತ್ತರಾಖಂಡ್​ ಸರ್ಕಾರದಿಂದ ಮಹತ್ವದ ನಿರ್ಧಾರ

ಹೈಕೋರ್ಟ್ ಆದೇಶವನ್ನ ಪಾಲಿಸುವ ಸಲುವಾಗಿ ತಡರಾತ್ರಿ ತನ್ನ ನಿರ್ಧಾರವನ್ನ ಹಿಂಪಡೆದ ಉತ್ತರಾಖಂಡ್​ ಸರ್ಕಾರ ಮುಂದಿನ ಆದೇಶದವರೆಗೂ ಚಾರ್​ ಧಾಮ್​ ಯಾತ್ರೆ ಮುಂದೂಡಿಕೆಯಾಗಲಿದೆ ಎಂದು ಹೇಳಿದೆ. ಈ ಮೂಲಕ ಜುಲೈ 1 ರಂದು ನಿಗದಿಯಾಗಿದ್ದ ಈ ಯಾತ್ರೆ ಅನಿಶ್ಚಿತ ಕಾಲದವರೆಗೆ ಮುಂದೂಡಲ್ಪಟ್ಟಿದೆ.

ಚಾರ್​ ಧಾಮ್​ ಯಾತ್ರೆಯನ್ನ ನಡೆಸಬಾರದು ಎಂಬ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದ ಉತ್ತರಾಖಂಡ್​ ಸರ್ಕಾರ ಮೊದಲ ಯಾತ್ರೆಯನ್ನ ಜುಲೈ 1ರಂದು ಹಾಗೂ ಎರಡನೆ ಯಾತ್ರೆಯನ್ನ ಜುಲೈ 11ಕ್ಕೆ ನಿಗದಿ ಮಾಡಿತ್ತು. ಮಾತ್ರವಲ್ಲದೇ ಯಾತ್ರೆಗೆ ಆಗಮಿಸುವ ಭಕ್ತರಿಗೆಂದೇ ಕೊರೊನಾ ಮಾರ್ಗಸೂಚಿಗಳನ್ನ ತಯಾರು ಮಾಡಲಾಗಿತ್ತು.

ಸೀಮಿತ ಸಂಖ್ಯೆಯ ಭಕ್ತರೊಂದಿಗೆ ಚಾರ್​ಧಾಮ್​ ಯಾತ್ರೆ ನಡೆಸುವ ಕ್ಯಾಬಿನೆಟ್​ ನಿರ್ಧಾರಕ್ಕೆ ಉತ್ತರಾಖಂಡ್​ ಹೈಕೋರ್ಟ್ ತಡೆಯೊಡ್ಡಿದೆ. ಅಲ್ಲದೇ ಚಾರ್​ ಧಾಮ್​ ಯಾತ್ರೆಯ ವೈಭವವನ್ನ ನೇರ ಪ್ರಸಾರ ಮಾಡುವಂತೆ ಹೇಳಿದೆ.

ಜೂನ್​ 25ರಂದು ಸೀಮಿತ ಸಂಖ್ಯೆಯ ಸ್ಥಳೀಯರಿಗೆ ಜುಲೈ 1ರಿಂದ ಚಾರ್​ ಧಾಮ್​ ಯಾತ್ರೆಯನ್ನ ನಡೆಸಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಚಮೋಲಿ, ಉತ್ತರಕಾಶಿ, ಮತ್ತು ರುದ್ರಪ್ರಯಾಗ್ನಲ್ಲಿ ಯಾತ್ರೆಗೆ ಭಕ್ತಾದಿಗಳಿಗೆ ಅವಕಾಶ ನೀಡಲಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...