alex Certify ಬಾಲಕಿಯ ಮೇಲೆ ರೇಪ್‌, ಮರ್ಡರ್‌: ಅಪರಾಧಿಗೆ ಎರಡು ತಿಂಗಳಿನಲ್ಲಿಯೇ ಗಲ್ಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಯ ಮೇಲೆ ರೇಪ್‌, ಮರ್ಡರ್‌: ಅಪರಾಧಿಗೆ ಎರಡು ತಿಂಗಳಿನಲ್ಲಿಯೇ ಗಲ್ಲು

ಮಥುರಾ: ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಥುರಾ ನ್ಯಾಯಾಲಯವು 2 ತಿಂಗಳೊಳಗೆ ತ್ವರಿತ ವಿಚಾರಣೆಯನ್ನು ಪೂರ್ಣಗೊಳಿಸಿ ಅಪರಾಧಿಗೆ ಮರಣದಂಡನೆ ವಿಧಿಸಿದೆ.

ಕೋಟ್ವಾಲಿ ಪ್ರದೇಶದ ಸೌಂಕ್ ರಸ್ತೆಯ ನಿವಾಸಿ 30 ವರ್ಷದ ಸತೀಶ್ ಎಂಬ ಅಪರಾಧಿಗೆ ಅಕ್ಟೋಬರ್ ಎರಡನೇ ವಾರದಲ್ಲಿ ಮಾಡಿದ ಅಪರಾಧಕ್ಕಾಗಿ 57 ದಿನಗಳಲ್ಲಿ ಶಿಕ್ಷೆ ವಿಧಿಸಲಾಯಿತು.

ಆತ ತನ್ನ ನೆರೆಹೊರೆಯಲ್ಲಿದ್ದ 10 ವರ್ಷದ ಬಾಲಕಿಗೆ ತಿಂಡಿ ನೀಡುವ ನೆಪದಲ್ಲಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ನಂತರ ಆತ ಬಾಲಕಿಯ ಕತ್ತು ಹಿಸುಕಿ ಆಕೆಯ ಶವವನ್ನು ಕಾಡಿನಲ್ಲಿ ಎಸೆದಿದ್ದ.

ಬಳಿಕ ಪಿಎಂವಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿತ್ತು. ಮೂಲಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 20 ಸಾಕ್ಷಿಗಳನ್ನು ಹಾಜರುಪಡಿಸಿದ್ದರು.

“ನವೆಂಬರ್ 24 ರಂದು, 10 ಸಾಕ್ಷಿಗಳ ಸಾಕ್ಷ್ಯವನ್ನು ಪೂರ್ಣಗೊಳಿಸಲಾಗಿತ್ತು. ಪ್ರಕರಣದ ವಿಚಾರಣೆಯನ್ನು ನವೆಂಬರ್ 25 ಕ್ಕೆ ಪೂರ್ಣಗೊಳಿಸಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...