alex Certify ಹೆಣ್ಣು ಹೆತ್ತ ಖುಷಿಯಲ್ಲಿರುವಾಗಲೇ ಮತ್ತೊಂದು ಬಂಪರ್; ಕೆಲ ಗಂಟೆಗಳ ಅಂತರದಲ್ಲಿ 81 ಲಕ್ಷ ರೂ. ಗೆದ್ದ ಬಾಣಂತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣು ಹೆತ್ತ ಖುಷಿಯಲ್ಲಿರುವಾಗಲೇ ಮತ್ತೊಂದು ಬಂಪರ್; ಕೆಲ ಗಂಟೆಗಳ ಅಂತರದಲ್ಲಿ 81 ಲಕ್ಷ ರೂ. ಗೆದ್ದ ಬಾಣಂತಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರಿಗೆ $100,000 (ಸುಮಾರು 81 ಲಕ್ಷ ರೂಪಾಯಿ) ಬಹುಮಾನ ಲಾಟರಿಯಲ್ಲಿ ಸಿಕ್ಕಿದ್ದು, ಇದರ ಬಗ್ಗೆ ಸುದ್ದಿ ವೈರಲ್​ ಆಗಿದೆ.

ಉತ್ತರ ಕೆರೊಲಿನಾದ ಮಹಿಳೆ ಲಾಟರಿಯಲ್ಲಿ ಈ ಬಹುಮಾನ ಗೆದ್ದಿದ್ದು, ತನ್ನ ಮಗಳ ಕಾಲ್ಗುಣ ಎಂದು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿರುವ ಕಾನ್ಕಾರ್ಡ್‌ನ 28 ವರ್ಷದ ಮಹಿಳೆಗೆ ಇಂಥದ್ದೊಂದು ಅದೃಷ್ಟ ಒಲಿದು ಬಂದಿದೆ.

ಈಕೆ ತನ್ನ ಲಕ್​ ಪರೀಕ್ಷೆ ಮಾಡಲು ಪವರ್​ಬಾಲ್​ ಟಿಕೆಟ್​ ಖರೀದಿಸಿದ್ದಳು. ಆ ವೇಳೆ ಈಕೆ ತುಂಬು ಗರ್ಭಿಣಿ. ಕಳೆದ ವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹೆತ್ತ ಖುಷಿ ಒಂದೆಡೆಯಾದರೆ, ಮಗು ಹೆತ್ತು ಎರಡು ಗಂಟೆಯ ಒಳಗೆ ಆಕೆಗೆ ಬಹುಮಾನದ ಸುದ್ದಿಯೂ ಬಂದಿದ್ದು, ಡಬಲ್​ ಧಮಾಕಾ ಎಂದು ಬರೆದುಕೊಂಡಿದ್ದಾಳೆ.

“ಮಗಳು ನನಗೆ ಅದೃಷ್ಟವನ್ನು ತಂದಳು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾಳೆ. ಏಕೆಂದರೆ ಈಕೆಗೆ ಇಬ್ಬರು ಗಂಡುಮಕ್ಕಳಿದ್ದರು. ಹೆಣ್ಣು ಮಗುವಿನ ಆಸೆಯಿಂದ ಮತ್ತೊಮ್ಮೆ ಗರ್ಭ ಧರಿಸಿದ್ದಳು. ಮಗಳು ಹುಟ್ಟಿದ ಖುಷಿಯಲ್ಲಿ ಇರುವಾಗಲೇ ಬಹುಮಾನವೂ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...