alex Certify ವಿಮಾನ ಪ್ರಯಾಣದ ನಡುವೆ ಕೊರೋನಾ ಪಾಸಿಟಿವ್, ಬಾತ್ರೂಮ್ನಲ್ಲೆ 5 ಗಂಟೆಗಳ ಕಾಲ ಶಿಕ್ಷಕಿ ಕ್ವಾರಂಟೈನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಪ್ರಯಾಣದ ನಡುವೆ ಕೊರೋನಾ ಪಾಸಿಟಿವ್, ಬಾತ್ರೂಮ್ನಲ್ಲೆ 5 ಗಂಟೆಗಳ ಕಾಲ ಶಿಕ್ಷಕಿ ಕ್ವಾರಂಟೈನ್

ಅಮೇರಿಕನ್ ಶಾಲೆಯ ಶಿಕ್ಷಕಿಯೊಬ್ಬರು ವಿಮಾನದಲ್ಲಿ ಪ್ರಯಾಣಿಸಿತ್ತಿರುವಾಗಲೆ ಕೊರೋನಾ ಸೋಂಕು ಪತ್ತೆಯಾಗಿದೆ. ಪಾಸಟಿವ್ ರಿಸಲ್ಟ್ ಬಂದಮೇಲೆ ಒಂದು ಕ್ಷಣವು ತಡಮಾಡದೆ ತಕ್ಷಣ ವಿಮಾನದ ಸ್ನಾನಗೃಹದಲ್ಲೆ(Bathroom) ಸ್ವಯಂ ಆಗಿ ಕ್ವಾರಂಟೈನ್ ಆಗಿದ್ದಾರೆ. ಡಿಸೆಂಬರ್ 20 ರಂದು ಐಸ್‌ಲ್ಯಾಂಡ್‌ನಿಂದ ಚಿಕಾಗೋಗೆ ಹೋಗುವಾಗ, ಮಿಷಿಗನ್ ಶಾಲೆಯ ಶಿಕ್ಷಕಿ ಮಾರಿಸಾ ಫೊಟಿಯೊಗೆ ಗಂಟಲು ನೋವು ಕಾಣಿಸಿಕೊಂಡಿದೆ. ತಕ್ಷಣ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು(rapid test kit) ಬಳಸಿಕೊಂಡು ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ನಿರ್ಧರಿಸಿದ ಫೊಟಿಯೊಳಲ್ಲಿ ಕೊರೋನಾ ದೃಢವಾಗಿದೆ.

ನಾನು ನನ್ನ ಕ್ಷಿಪ್ರ ಪರೀಕ್ಷೆ ಕಿಟ್ ತೆಗೆದುಕೊಂಡು ಬಾತ್ರೂಮ್ಗೆ ಬಂದು, ಪರೀಕ್ಷಿಸಿಕೊಂಡೆ, ಎರಡು ಸೆಕೆಂಡ್ ಗಳಲ್ಲೆ ಪಾಸಿಟಿವ್ ರಿಸಲ್ಟ್ ಬಂದಿತು‌. ವಿಮಾನದಲ್ಲಿ 150 ಜನರಿದ್ದರು, ಅವರಿಗೆ ನನ್ನಿಂದ ಸೋಂಕು ತಗುಲಬಹುದು ಎಂಬ ಭಯದಲ್ಲಿ ಬಾತ್ರೂಮ್ನಲ್ಲೆ ಸೆಲ್ಫ್ ಕ್ವಾರಂಟೈನ್ ಆದೆ ಎಂದು ಫೊಟಿಯೊ ಮಾಧ್ಯಮವೊಂದಕ್ಕೆ ಸಂದರ್ಶನ‌ ನೀಡಿದ್ದಾರೆ. ಈ ಬಗ್ಗೆ ಫೊಟಿಯೊ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದರು.

ಮತ್ತೊಂದು ಸಂದರ್ಶನದಲ್ಲಿ ಫೊಟಿಯೊ ಹೇಳಿರುವ ಪ್ರಕಾರ ಆಕೆ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ‌. ಆದರೆ ಅವರು ಲಸಿಕೆ ಪಡೆಯದ ಹಲವಾರು ಮಂದಿಯೊಂದಿಗೆ ಕೆಲಸ ಮಾಡುವುದರಿಂದ ಯಾವಾಗಲು ತಮ್ಮ ಬಳಿ ಟೆಸ್ಟ್ ಕಿಟ್ ಗಳನ್ನ ಇಟ್ಟುಕೊಂಡಿರುತ್ತಾರೆ. ಪ್ರಯಾಣಕ್ಕು ಮೊದಲು ಎರಡು ಆರ್ಟಿಪಿಸಿಆರ್ ಹಾಗೂ ಐದು ರ್ಯಾಪಿಡ್ ಟೆಸ್ಟ್ ಗೆ ಒಳಗಾಗಿದ್ದರು ನೆಗೆಟಿವ್ ವರದಿಯಾಗಿತ್ತು.

ಆದರೆ ವಿಮಾನದಲ್ಲಿ ಗಂಟಲು ನೋವು ಕಾಣಿಸಿಕೊಂಡ ನಂತರದ ಟೆಸ್ಟ್ ನಲ್ಲಿ ರಿಸಲ್ಟ್ ಪಾಸಿಟಿವ್ ಬಂದ್ಮೇಲೆ ಕ್ವಾರಂಟೈನ್ ಆಗಲೇಬೇಕಾಯ್ತು. ಬಾತ್ರೂಮ್ನಂತಹ ಸಣ್ಣ ಜಾಗದಲ್ಲಿ ಐದು ಗಂಟೆ ಇರುವುದು ಕಷ್ಟ ಆದರೂ ಇತರ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ ನಿರ್ಧಾರ‌. ಈ ವೇಳೆ ವಿಮಾನ ಸಿಬ್ಬಂದಿ ಕೂಡ ಶಾಂತಾವಗಿ ನನಗೆ ಸಹಾಯ ಮಾಡಿದರು ಎಂದು ಫೊಟೊಯೊ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...