alex Certify ಕೃತಕ ಗರ್ಭದಾರಣೆಗೆ ಸ್ವಂತ ವೀರ್ಯ ಬಳಸಿದ ಪ್ರಸೂತಿ ತಜ್ಞ; 34 ವರ್ಷಗಳ ಬಳಿಕ ಕೋರ್ಟ್ ಮೆಟ್ಟಿಲೇರಿದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃತಕ ಗರ್ಭದಾರಣೆಗೆ ಸ್ವಂತ ವೀರ್ಯ ಬಳಸಿದ ಪ್ರಸೂತಿ ತಜ್ಞ; 34 ವರ್ಷಗಳ ಬಳಿಕ ಕೋರ್ಟ್ ಮೆಟ್ಟಿಲೇರಿದ ಮಹಿಳೆ…!

ವಾಷಿಂಗ್ಟನ್​​ನ ಮಹಿಳೆಯೊಬ್ಬರು ತಮ್ಮ ವೈದ್ಯರ ವಿರುದ್ಧವೇ ಮೊಕದ್ದಮೆ ಹೂಡಿದ್ದಾರೆ. 34 ವರ್ಷಗಳ ಹಿಂದೆ ತಮಗೆ ಕೃತಕ ಗರ್ಭದಾರಣೆ ಮಾಡುವ ಸಂದರ್ಭದಲ್ಲಿ ನನಗೆ ಅರಿವೆ ಇಲ್ಲದಂತೆ ರಹಸ್ಯವಾಗಿ ತಮ್ಮ ವೀರ್ಯ ಬಳಕೆ ಮಾಡಿದ್ದರು ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.

1989ರಲ್ಲಿ ವಾಷಿಂಗ್ಟನ್​​ನ ಸ್ಪೋಕೇನ್​ನಲ್ಲಿ ನೆಲೆಸಿರುವ ಪ್ರಸೂತಿ ತಜ್ಞ ಹಾಗೂ ಸ್ತ್ರೀರೋಗ ತಜ್ಞ ಡಾ. ಡೇವಿಡ್​ ಆರ್​ ಕ್ಲೇಪೂಲ್​ ಎಂಬವರ ಬಳಿಯಲ್ಲಿ ನಾನು ಕೃತಕ ಗರ್ಭದಾರಣೆಗೆ ಚಿಕಿತ್ಸೆ ಪಡೆದಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಮಹಿಳೆಗೆ ಈಗ 67 ವರ್ಷವಾಗಿದ್ದು ಇವರ ಹೆಸರು ಶರೋನ್​ ಹೇಯ್ಸ್​ ಎನ್ನಲಾಗಿದೆ. ಪತಿಗೆ ಸಂತಾನೋತ್ಪತ್ತಿ ಸಮಸ್ಯೆ ಇದ್ದ ಕಾರಣ ಶೆರೋನ್​ ಕೃತಕ ಗರ್ಭದಾರಣೆ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ.

ಸ್ಪೋಕೇನ್​ ಕೌಂಟಿ ಸುಪೀಯರ್​​ ಕೋರ್ಟ್​ನಲ್ಲಿ ಬುಧವಾರ ಈ ಸಂಬಂಧ ಅರ್ಜಿ ವಿಚಾರಣೆ ನಡೆದಿದೆ. ಶೆರೋನ್​ ಅನಾಮಧೇಯ ವ್ಯಕ್ತಿಯಿಂದ ತಮಗೆ ವೀರ್ಯ ಬೇಕೆಂದು ಹೇಳಿದ್ದರು ಎನ್ನಲಾಗಿದೆ. ಆದರೆ ಕ್ಲೇಪೂಲ್​ ನನಗೆ ಮೋಸ ಮಾಡಿದ್ದು ಅವರ ವೀರ್ಯ ಬಳಕೆ ಮಾಡಿದ್ದಾರೆ. ನಾನು ಅನಾಮಧೇಯ ವ್ಯಕ್ತಿಯಿಂದ ವೀರ್ಯ ಪಡೆಯುವ ಮೂಲಕ ಆ ವ್ಯಕ್ತಿಯ ಕಣ್ಣಿನ ಬಣ್ಣ ಹಾಗೂ ಗುಣಲಕ್ಷಣ ಹೀಗೆಯೇ ಇರಬೇಕೆಂದು ಹೇಳಿದ್ದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಸಂಪೂರ್ಣ ಚಿಕಿತ್ಸೆಗೆ ವೈದ್ಯ ಕ್ಲೇಪೂಲ್​​ 100 ಡಾಲರ್​ ಶುಲ್ಕ ಪಡೆದುಕೊಂಡಿದ್ದರು ಎನ್ನಲಾಗಿದೆ. 33 ವರ್ಷದ ಹಿಂದೆ ಶೆರೋನ್​ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಸ್ತುತ 33 ವರ್ಷ ಪ್ರಾಯದ ಬ್ರಿಯನ್ನಾ ಹೇಯ್ಸ್​ ಡಿಎನ್​ಎ ಪರೀಕ್ಷೆಯಿಂದ ಈ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇನ್ನೊಂದು ವಿಚಾರ ಏನೆಂದರೆ ಈ ವೈದ್ಯ 16 – 17 ಪ್ರಕರಣಗಳಲ್ಲಿ ಇದೆ ರೀತಿ ಸ್ವಂತ ವೀರ್ಯ ಬಳಕೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...