alex Certify ಕ್ಯಾನ್ಸರ್​ನಿಂದ ದೃಷ್ಟಿ ಕಳೆದುಕೊಂಡರೂ ಕುಗ್ಗದೇ ಕೃತಕ ಕಣ್ಣು ಸೃಷ್ಟಿ…! ಎಂಜಿನಿಯರ್​ಗೆ ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್​ನಿಂದ ದೃಷ್ಟಿ ಕಳೆದುಕೊಂಡರೂ ಕುಗ್ಗದೇ ಕೃತಕ ಕಣ್ಣು ಸೃಷ್ಟಿ…! ಎಂಜಿನಿಯರ್​ಗೆ ಶ್ಲಾಘನೆಗಳ ಮಹಾಪೂರ

ಜೀವನದಲ್ಲಿ ಚಿಕ್ಕ ಸಮಸ್ಯೆ ಬಂದರೂ ಅದನ್ನು ಎದುರಿಸಲಾಗದೇ ಭಯಪಡುವವರು ಹಲವರು. ಅಂಥವರ ನಡುವೆ ಇಲ್ಲೊಬ್ಬ ಆಶಾವಾದಿ ಕಾಣುತ್ತಾನೆ. ಕ್ಯಾನ್ಸರ್​ನಿಂದಾಗಿ ಒಂದು ಕಣ್ಣು ಕಳೆದುಕೊಂಡಿದ್ದರೂ ಜೀವನೋತ್ಸಾಹ ಮೆರೆದು ಕೃತಕ ಕಣ್ಣನ್ನು ತಯಾರಿಸಿ ಅದರಿಂದ ದೃಷ್ಟಿ ಪಡೆದಿರುವ ಅಪರೂಪದ ವ್ಯಕ್ತಿ ಈತ.

ಅಮೆರಿಕದ ಇಂಜಿನಿಯರ್ ಬ್ರಿಯಾನ್ ಸ್ಟಾನ್ಲಿ, ಅವರು ಕ್ಯಾನ್ಸರ್​ನಿಂದ ಕಣ್ಣು ಕಳೆದುಕೊಂಡ ನಂತರ, ತಮ್ಮ ಈ ದುರದೃಷ್ಟಕ್ಕೆ ಅಳುತ್ತಾ ಕುಳಿತುಕೊಳ್ಳಲಿಲ್ಲ. ತಮ್ಮನ್ನು ತಾವು ನವೋದ್ಯಮಿ ಎಂದು ಕರೆದುಕೊಳ್ಳುವ ಬ್ರಿಯಾನ್ ಅವರು, ಐ ಪ್ಯಾಚ್ ಅಥವಾ ಕೃತಕ ಕಣ್ಣು ಖರೀದಿಸುವ ಬದಲು ತಮ್ಮದೇ ಆದ ಪ್ರಾಸ್ಥೆಟಿಕ್ ಕಣ್ಣನ್ನು ರಚಿಸಿ ಅದರಲ್ಲಿ ಯಶಸ್ವಿಯಾಗಿದ್ದಾನೆ.

ಪ್ರಾಸ್ಥೆಟಿಕ್ ಕಣ್ಣು ಬ್ಯಾಟರಿಯ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಬೆಳಕಿನ ಮೂಲಕ ದೃಷ್ಟಿಯನ್ನೂ ಪಡೆದಿದ್ದಾನೆ. ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಲ್ಲಿ ರೋಬೋಟ್ ಅಥವಾ ಆಂಡ್ರಾಯ್ಡ್‌ನಂತೆ ಈ ಕೃತಕ ಕಣ್ಣು ಕಾಣಿಸುತ್ತದೆ. ಈ ಕುರಿತು ಈತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಭಾರಿ ಸದ್ದು ಮಾಡುತ್ತಿದೆ. ಎಂಜಿನಿಯರ್​ ಕಾರ್ಯಕ್ಕೆ ಜಾಲತಾಣದಲ್ಲಿ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...