alex Certify ಜನವರಿ 6 ರ ದಂಗೆ ಮಾಸುವ ಮೊದಲೇ ಅಮೆರಿಕ ಕ್ಯಾಪಿಟಲ್ಸ್ ಮೇಲೆ ಮತ್ತೆ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 6 ರ ದಂಗೆ ಮಾಸುವ ಮೊದಲೇ ಅಮೆರಿಕ ಕ್ಯಾಪಿಟಲ್ಸ್ ಮೇಲೆ ಮತ್ತೆ ದಾಳಿ

ವಾಷಿಂಗ್ಟನ್: ಜನವರಿ 6 ರಂದು ನಡೆದ ದಂಗೆ ನೆನಪು ಮಾಸುವ ಮೊದಲೇ ಅಮೆರಿಕ ಕ್ಯಾಪಿಟಲ್ಸ್ ಮೇಲೆ ಮತ್ತೊಂದು ದಾಳಿ ನಡೆದಿದೆ. ಆಗಂತುಕನೊಬ್ಬ ಭದ್ರತಾ ವ್ಯವಸ್ಥೆಯನ್ನು ಭೇದಿಸಿ ಕಾರು ನುಗ್ಗಿಸಿದ್ದಾನೆ. ದಾಳಿಯಲ್ಲಿ ಭದ್ರತಾ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ದಾಳಿಕೋರನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ಅಮೆರಿಕ ಸಂಸತ್ ಭವನಕ್ಕೆ ವಾಹನ ನುಗ್ಗಿಸಿ ದಾಂಧಲೆ ನಡೆಸಿದ ಘಟನೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿದ್ದಾರೆ. ದಾಳಿ ನಡೆಸಿದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಸ್ಟರ್  ಹಾಲಿಡೇ ಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕ್ಯಾಂಪ್ ಡೇವಿಡ್ ಗೆ ತೆರಳಿದ್ದು, ಕ್ಯಾಪಿಟಲ್ಸ್  ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಘಟನೆಯಿಂದಾಗಿ ನನಗೆ ತೀವ್ರ ಆಘಾತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ರಾಜಧಾನಿಯಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದರೂ ಇಂತಹ ದಾಳಿ ನಡೆದಿದೆ ಎಂದು ಕ್ಯಾಪಿಟಲ್ ಪೊಲೀಸ್ ಆಕ್ಟಿಂಗ್ ಚೀಫ್ ಯೋಗಾನಂದ ಪಿಟ್ಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...