alex Certify ಹೆಚ್ -1 ಬಿ ವೀಸಾ: ಭಾರತೀಯರಿಗೆ ಗುಡ್ ನ್ಯೂಸ್; ಸಂಗಾತಿಗೂ ಉದ್ಯೋಗಾವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ -1 ಬಿ ವೀಸಾ: ಭಾರತೀಯರಿಗೆ ಗುಡ್ ನ್ಯೂಸ್; ಸಂಗಾತಿಗೂ ಉದ್ಯೋಗಾವಕಾಶ

ವಾಷಿಂಗ್ಟನ್: ಅಮೆರಿಕ ಸರ್ಕಾರದಿಂದ ಭಾರತೀಯ ಸ್ನೇಹಿ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಹೆಚ್ -1 ಬಿ ವೀಸಾದಾರರ ಸಂಗಾತಿಗಳಿಗೂ ಉದ್ಯೋಗ ಅವಕಾಶ ನೀಡಲಾಗುವುದು.

ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹೆಚ್ -1 ಬಿ ವೀಸಾ ಪರವಾನಿಗೆ ಹೊಂದಿದವರ ಸಂಗಾತಿಗೂ ಉದ್ಯೋಗ ನೀಡಲು ಅವಕಾಶ ಕಲ್ಪಿಸುವ ಮಹತ್ವದ ನಿರ್ಣಯಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರ ಅಂಗೀಕಾರ ನೀಡಿದೆ. ಇದರಿಂದಾಗಿ ಹೆಚ್ -1 ಬಿ ವೀಸಾ ಪಡೆದು ಉದ್ಯೋಗದಲ್ಲಿರುವವರ ಸಂಗಾತಿಗಳಿಗೆ ಉದ್ಯೋಗವಕಾಶ ಪಡೆಯಲು ಅನುಕೂಲವಾಗಲಿದೆ.

ಅಮೆರಿಕದ ಕಂಪನಿಗಳು ಪ್ರತಿವರ್ಷ ಭಾರತದಂತಹ ದೇಶಗಳಿಂದ ಸಾವಿರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಇಂತಹ ಉದ್ಯೋಗಿಗಳ ಸಂಗಾತಿ ಮತ್ತು ಅವರ 21 ವರ್ಷ ವಯೋಮಿತಿಯೊಳಗಿನ ಮಕ್ಕಳಿಗೆ ಹೆಚ್ -4 ವೀಸಾ ನೀಡಲಾಗುವುದು. ಇವರು ಉದ್ಯೋಗ ಮಾಡಲು ಅವಕಾಶ ಇರಲಿಲ್ಲ.

ಈಗ ಅಮೆರಿಕದಲ್ಲಿ ನೆಲೆಸಿರುವ ಹೆಚ್ -4 ವೀಸಾ ಪಡೆದವರಲ್ಲಿ ಬಹುತೇಕರು ಭಾರತೀಯ ಮೂಲದವರಾಗಿದ್ದು, ಅವರಿಗೂ ಉದ್ಯೋಗಾವಕಾಶ ಕಲ್ಪಿಸಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...