alex Certify ರಿಷಬ್‌ ಗೆ ವಿಷ್‌ ಮಾಡಿದ ಊರ್ವಶಿ…! ಟ್ವೀಟ್‌ ನೋಡುತ್ತಿದ್ದಂತೆ ಫ್ಯಾನ್ಸ್‌ ಕೆಂಡಾಮಂಡಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಷಬ್‌ ಗೆ ವಿಷ್‌ ಮಾಡಿದ ಊರ್ವಶಿ…! ಟ್ವೀಟ್‌ ನೋಡುತ್ತಿದ್ದಂತೆ ಫ್ಯಾನ್ಸ್‌ ಕೆಂಡಾಮಂಡಲ

ಬಾಲಿವುಡ್‌ನ ಮಾದಕ ಚೆಲುವೆ, ‘ಮಿಸ್‌ ಯೂನಿವರ್ಸ್‌’ ಊರ್ವಶಿ ರೌಟೆಲಾ ಅವರು ತಮ್ಮ ಟ್ವಿಟರ್‌ ಖಾತೆಯ ಮೂಲಕ ಕ್ರಿಕೆಟಿಗ ರಿಷಬ್‌ ಪಂತ್‌ಗೆ ಇತ್ತೀಚೆಗೆ (ಅಕ್ಟೋಬರ್‌ 5ರಂದು) ’ಹ್ಯಾಪಿ ಬರ್ತಡೇ’ ಎಂದಿದ್ದಾರೆ. ಅಷ್ಟಕ್ಕೇ ರಿಷಬ್‌ನ ಫ್ಯಾನ್ಸ್‌ ಕೆಂಡಾಮಂಡಲಗೊಂಡು ಊರ್ವಶಿ ವಿರುದ್ಧ ಅಸಮಾಧಾನ ಕಮೆಂಟ್‌ಗಳನ್ನ ಹಾಕುತ್ತಾ ಟ್ರೋಲ್‌ ಮಾಡಿದ್ದಾರೆ.

’ನಮ್ಮ ಹುಡುಗನನ್ನು ವಿಶ್ವ ಕಪ್‌ವರೆಗೆ ಡಿಸ್ಟರ್ಬ್‌ ಮಾಡಬೇಡ. ಗಮನ ತಪ್ಪಿಸಬೇಡ’ ಎಂದು ಊರ್ವಶಿಗೆ ರಿಷಬ್‌ ಫ್ಯಾನ್‌ವೊಬ್ಬ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾನೆ. ಹಾಗಾದರೆ ಅವರ ನಡುವೆ ಅಂಥದ್ದು ಏನಾಗಿತ್ತು?

PUC ಪಾಸಾದವರಿಗೆ 20 ಸಾವಿರ, ಪದವೀಧರರಿಗೆ 25, ಪಿಜಿ ಆದವರಿಗೆ 30 ಸಾವಿರ ರೂ. ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

2018ರಲ್ಲಿ ರಿಷಬ್‌ ಮತ್ತು ಊರ್ವಶಿ ಗಾಢವಾದ ಸ್ನೇಹದಲ್ಲಿ ಮುಳುಗಿದ್ದರಂತೆ. ಅವರಿಬ್ಬರೂ ಸ್ನೇಹದ ಕಡಲಲ್ಲೇ ಪ್ರೀತಿಯ ಸವಾರಿಯನ್ನು ಕೂಡ ಮಾಡಲು ಮುಂದಾಗಿದ್ದರು ಎಂದು ಆಪ್ತ ಮೂಲಗಳು ವರದಿ ಮಾಡಿದ್ದವು. ಇನ್ನೇನು ತಮ್ಮ ನಡುವಿನ ಪ್ರೀತಿ-ಪ್ರಣಯಗಳ ಬಗ್ಗೆ ಅಧಿಕೃತ ಘೋಷಣೆ ಮಾಡಬೇಕು ಎನ್ನುವಷ್ಟರಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಊರ್ವಶಿಯನ್ನು ರಿಷಬ್‌ ಬ್ಲಾಕ್‌ ಮಾಡಿದ್ದರು. ಈ ವಿಚಾರ ಫ್ಯಾನ್ಸ್‌ ವಲಯದಲ್ಲಿ ಬೇಗನೇ ಹಬ್ಬಿತ್ತು.

ಬಹುಶಃ ಕ್ರಿಕೆಟ್‌ ಮೇಲಿನ ಗಮನ ತಪ್ಪಿ ಫಾರ್ಮ್‌ ಕಳೆದುಕೊಳ್ಳುವ ಭೀತಿ ರಿಷಬ್‌ಗೆ ಇದ್ದಿರಬಹುದು. ಇಲ್ಲವೇ ಊರ್ವಶಿಗೆ ತನ್ನ ನಟನೆಯ ಮೇಲಿನ ಗಮನ ತಪ್ಪುವ ಆತಂಕ ಮೂಡಿರಬಹುದು ಎಂದು ಮಾಧ್ಯಮಗಳು ಶಂಕೆ ವ್ಯಕ್ತಪಡಿಸಿದ್ದವು.

ಪ್ರತಿ ದಿನವೂ ಒಂದು ‘ಬಾಳೆಹಣ್ಣು’ ತಿನ್ನಿ ಇಷ್ಟೆಲ್ಲಾ ಲಾಭ ಪಡೆಯಿರಿ

ಇದೇ ಅಧ್ಯಾಯವನ್ನು ಹ್ಯಾಪಿ ಬರ್ತ್‌ಡೇ ಶುಭಾಶಯದ ಮೂಲಕ ಊರ್ವಶಿ ಪುನಾರಂಭ ಮಾಡಬಹುದು ಎಂಬ ಆತಂಕವು ರಿಷಬ್‌ನ ಕ್ರಿಕೆಟ್‌ ಫ್ಯಾನ್ಸ್‌ನಲ್ಲಿ ಮೂಡಿದ್ದು, ಅವರು ಊರ್ವಶಿಯನ್ನು ಟ್ರೋಲ್‌ ಮಾಡಲು ಪ್ರಮುಖ ಕಾರಣ ಎನ್ನಲಾಗಿದೆ.

‘ಟ್ವಿಟರ್‌ನಲ್ಲೂ ಊರ್ವಶಿಯನ್ನು ಬ್ಲಾಕ್‌ ಮಾಡಿಬಿಡು ಗುರುವೇ’ ಎಂದು ರಿಷಬ್‌ಗೆ ಅಪ್ಪಟ ಅಭಿಮಾನಿಯೊಬ್ಬ ಟ್ವಿಟರ್‌ ಖಾತೆ ಮೂಲಕ ಮನವಿ ಕೂಡ ಮಾಡಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...