alex Certify ಅಣ್ಣನಿಂದಲೇ ಘೋರ ಕೃತ್ಯ: ನೆರೆಮನೆಯವನೊಂದಿಗೆ ಸಂಬಂಧ ಬೆಳೆಸಿದ ಸೋದರಿ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಣ್ಣನಿಂದಲೇ ಘೋರ ಕೃತ್ಯ: ನೆರೆಮನೆಯವನೊಂದಿಗೆ ಸಂಬಂಧ ಬೆಳೆಸಿದ ಸೋದರಿ ಬರ್ಬರ ಹತ್ಯೆ

ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ನೆರೆಹೊರೆಯವರೊಂದಿಗಿನ ಸಂಬಂಧ ಹೊಂದಿದ್ದ ಅಪ್ರಾಪ್ತ ಸಹೋದರಿಯನ್ನು ಯುವಕನೊಬ್ಬ ಬರ್ಬರವಾಗಿ ಕಡಿದು ಕೊಂದಿದ್ದಾನೆ.

ಘಟನೆ ಗುರುವಾರ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯ ನಂತರ ಆರೋಪಿ ಸಹೋದರ ಪೊಲೀಸರ ಮುಂದೆ ಶರಣಾಗಲು ಕತ್ರಾ ಬಜಾರ್ ಪೊಲೀಸ್ ಠಾಣೆಗೆ ಹೋಗಿದ್ದ.

ಕಲೀಂ ಎಂದು ಗುರುತಿಸಲಾದ ಆರೋಪಿಯು ತನ್ನ 16 ವರ್ಷದ ಸಹೋದರಿ ನೆರೆಹೊರೆಯವರೊಂದಿಗೆ ಸಂಬಂಧ ಹೊಂದಿದ್ದರಿಂದ ಅಸಮಾಧಾನಗೊಂಡು ಇಂತಹ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ಆರೋಪಿ ತನ್ನ ಸಹೋದರಿ ಬಾಲಕನೊಂದಿಗೆ ಮಾತನಾಡುವಾಗ ಸಿಕ್ಕಿಬಿದ್ದಿದ್ದಕ್ಕೆ ಥಳಿಸಿದ್ದ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಾಯಿಯ ದೂರಿನ ನಂತರ ಆರೋಪಿಯ ವಿರುದ್ಧ ಕೊಲೆಯ ಎಫ್ಐಆರ್ ದಾಖಲಿಸಲಾಗಿದೆ. ಕಲೀಂನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಕೊಲ್ಲಲು ಬಳಸಿದ ಮೊನಚಾದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಸರ್ಕಲ್ ಆಫೀಸರ್ ಮುನ್ನಾ ಉಪಾಧ್ಯಾಯ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...