alex Certify ಮೋಟಾರ್​ ಸೈಕಲ್​ ಏರಿ ಹುಚ್ಚಾಟ ಮೆರೆದವನಿಗೆ ಬಿತ್ತು ಭಾರೀ ದಂಡ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋಟಾರ್​ ಸೈಕಲ್​ ಏರಿ ಹುಚ್ಚಾಟ ಮೆರೆದವನಿಗೆ ಬಿತ್ತು ಭಾರೀ ದಂಡ….!

ಸೋಶಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆಂದು ಹೆಲ್ಮೆಟ್​ ಧರಿಸದೇ ಮೊಟಾರ್​ ಸೈಕಲ್​ ಹತ್ತಿ ನೃತ್ಯ ಮಾಡಿದ ಯುವಕನಿಗೆ ಪೊಲೀಸರು ಚಲನ್​ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚಿನ ಫಾಲೋವರ್ಸ್ ಹಾಗೂ ಲೈಕ್ಸ್​ ಸಂಪಾದಿಸುವ ಸಲುವಾಗಿ ಯುವಕ ರೀತಿ ಮಾಡಿದ್ದಾನೆ ಎನ್ನಲಾಗಿದೆ.

ಕಾನ್ಪುರದ ಕಲ್ಯಾಣಪುರ ಎಂಬಲ್ಲಿನ ಮಸ್ವಾನ್​ಪುರ ನಿವಾಸಿ ಖಾಲಿದ್​ ಅಹಮದ್ ಎಂಬಾತ ಈ ರೀತಿಯ ಹುಚ್ಚು ಸಾಹಸ ಪ್ರದರ್ಶಿಸಿದ ಯುವಕ.

ವಾರಗಳ ಹಿಂದೆ ಈತ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದ. ಇದರಲ್ಲಿ ಆತ ಬಾಲಿವುಡ್​ ನಟ ಗೋವಿಂದ ನಟನೆಯ ಏಕ್​ ಲಡಕಿ ಚಾಹಿಯೇ ಖಾಸ್​ ಖಾಸ್​ ಎಂಬ ಹಾಡಿಗೆ ಮೋಟಾರ್​ ಸೈಕಲ್​ ಏರಿ ಧರಿಸಿದ್ದಾನೆ. ಈ ವೇಳೆ ಆತ ಹೆಲ್ಮೆಟ್​ ಕೂಡ ಧರಿಸಿರಲಿಲ್ಲ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.
ಖಾಲಿದ್​ಗೆ ಸಂಚಾರಿ ಠಾಣೆ ಪೊಲೀಸರು 9000 ರೂಪಾಯಿ ಮೌಲ್ಯದ ಚಲನ್​ ಕಳುಹಿಸಿಕೊಟ್ಟಿದ್ದಾರೆ. ಸೆಕ್ಷನ್​ 129 ಹಾಗೂ 194(ಡಿ) ಅಡಿಯಲ್ಲಿ ಯುವಕನಿಗೆ ಚಲನ್​ ನೀಡಲಾಗಿದೆ . ಪೊಲೀಸರ ಕ್ರಮಕ್ಕೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...