alex Certify ಶಾಕಿಂಗ್…! ಮನೆಗೆ ನುಗ್ಗಿದ ಕಾಮುಕನಿಂದ ಅಟ್ಟಹಾಸ, ಗರ್ಭಿಣಿ ಎಂದ್ರೂ ಕೇಳದೇ ಕುತ್ತಿಗೆಗೆ ಚಾಕು ಹಿಡಿದು ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್…! ಮನೆಗೆ ನುಗ್ಗಿದ ಕಾಮುಕನಿಂದ ಅಟ್ಟಹಾಸ, ಗರ್ಭಿಣಿ ಎಂದ್ರೂ ಕೇಳದೇ ಕುತ್ತಿಗೆಗೆ ಚಾಕು ಹಿಡಿದು ಅತ್ಯಾಚಾರ

ಉತ್ತರಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ ಕಾಮುಕ ಅಟ್ಟಹಾಸ ಮೆರೆದಿದ್ದು 6 ತಿಂಗಳ ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಮಹಾರಾಜಗಂಜ್ ಜಿಲ್ಲೆಯ ಪನಿಯಾರಾ ಗ್ರಾಮದಲ್ಲಿ ಘಟನೆ ನಡೆದಿದೆ. ಸೋಮವಾರ ರಾತ್ರಿ ಗರ್ಭಿಣಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ವ್ಯಕ್ತಿ ಆಕೆಯ ಕುತ್ತಿಗೆಗೆ ಚಾಕು ಹಿಡಿದು ಜೀವ ತೆಗೆಯುವುದಾಗಿ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.

ತಾನು 6 ತಿಂಗಳ ಗರ್ಭಿಣಿ ಎಂದು ಆಕೆ ಹೇಳಿದರೂ ಕೇಳದೆ ಅತ್ಯಾಚಾರ ಎಸಗಿದ್ದು, ಗರ್ಭಣಿ ಕಿರುಚಾಡಿದ್ದಾಳೆ. ಆಕೆಯ ಕಿರುಚಾಟ ಕೇಳಿ ಅತ್ತೆ ಆಗಮಿಸಿ ಆರೋಪಿಯನ್ನು ಹಿಡಿದುಕೊಂಡಿದ್ದಾರೆ. ಇವರ ಮನೆ ಗಲಾಟೆ ಕೇಳಿ ಸ್ಥಳೀಯರು ಕೂಡ ಧಾವಿಸಿ ಬಂದಿದ್ದು ಅವರನ್ನು ತಳ್ಳಿ ಆರೋಪಿ ಪರಾರಿಯಾಗಿದ್ದಾನೆ. ಆತ ಮಹಿಳೆಯ ನೆರೆಮನೆಯವನೇ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ಆರೋಪಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪನಿಯಾರಾ ಠಾಣೆ ಅಧಿಕಾರಿ ದಿಲೀಪ್ ಸಿಂಗ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...