alex Certify ಕೊಳದಲ್ಲಿ ಸ್ನಾನಕ್ಕಿಳಿದಿದ್ದ ಬಾಲಕ ಮೊಸಳೆಗೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಳದಲ್ಲಿ ಸ್ನಾನಕ್ಕಿಳಿದಿದ್ದ ಬಾಲಕ ಮೊಸಳೆಗೆ ಬಲಿ

ಕೊಳದಲ್ಲಿ ಸ್ನಾನ ಮಾಡಲು ಹೋದ ಎಂಟು ವರ್ಷದ ಬಾಲಕ ಮೊಸಳೆಗೆ ಆಹಾರವಾಗಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಬಾಲಕನ ಛಿದ್ರಛಿದ್ರಗೊಂಡ ಮೃತದೇಹ ಭಾನುವಾರ ಸಿಕ್ಕಿದೆ.

ಬಾಲಕ ತನ್ನ ಸಹೋದರಿಯೊಂದಿಗೆ ಕೊಳದಲ್ಲಿ ಸ್ನಾನ ಮಾಡಲು ತೆರಳಿದ್ದಾನೆ. ಈ ಇಬ್ಬರು ಮಕ್ಕಳು ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಇದ್ದಕ್ಕಿದ್ದಂತೆ ರಕ್ಕಸ ಗಾತ್ರದ ಮೊಸಳೆ ಬಾಲಕನ ಮೇಲೆ ದಾಳಿ ನಡೆಸಿದೆ. ಅಷ್ಟೇ ಅಲ್ಲ, ಅವನನ್ನು ಹೊತ್ತೊಯ್ದಿದೆ.

ಸಹೋದರಿ ಓಡಿ ಹೋಗಿ ಪೋಷಕರಿಗೆ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಪೋಷಕರು ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬಾಲಕನ ಪತ್ತೆ ಕಾರ್ಯ ನಡೆಸಿದರು. ಆದರೆ, ಬಾಲಕನ ಪ್ರಾಣ ಉಳಿಸಲು ಅವರಿಂದ ಸಾಧ್ಯವಾಗಿಲ್ಲ. ಕಾರ್ಯಾಚರಣೆ ನಡೆಸುವ ವೇಳೆಗೆ ಮೊಸಳೆ ಆತನ ಜೀವ ತಿಂದಿತ್ತು. ಬಾಲಕನ ಮೃತದೇಹ ಭಾನುವಾರ ಬೆಳಗ್ಗೆ ವೇಳೆಗೆ ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...