alex Certify ಟ್ಯೂಷನ್ ನಿಂದ ಮನೆಗೆ ಬಾರದ ಮಗಳ ಹುಡುಕಿ ಹೋದ ಪೋಷಕರಿಗೆ ಶಾಕ್: ಮೆಡಿಕಲ್ ಸ್ಟೋರ್ ನಲ್ಲೇ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ಯೂಷನ್ ನಿಂದ ಮನೆಗೆ ಬಾರದ ಮಗಳ ಹುಡುಕಿ ಹೋದ ಪೋಷಕರಿಗೆ ಶಾಕ್: ಮೆಡಿಕಲ್ ಸ್ಟೋರ್ ನಲ್ಲೇ ಅತ್ಯಾಚಾರ

ಬರೇಲಿ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, ಕೋಚಿಂಗ್ ಕ್ಲಾಸ್‌ನಿಂದ ಹಿಂತಿರುಗುತ್ತಿದ್ದ ಬಾಲಕಿ ಮೇಲೆ ಮೆಡಿಕಲ್ ಸ್ಟೋರ್‌ನಲ್ಲಿ 17 ವರ್ಷದ ಹುಡುಗ ಅತ್ಯಾಚಾರ ಎಸಗಿದ್ದಾನೆ.

13 ವರ್ಷದ ಬಾಲಕಿ ಮಂಗಳವಾರ ಸಂಜೆ ಟ್ಯೂಷನ್ ಮುಗಿಸಿ ಮನೆಗೆ ತೆರಳುವಾ ಈ ಘಟನೆ ನಡೆದಿದೆ. ಆರೋಪಿ ತನ್ನ ಕುಟುಂಬದ ಒಡೆತನದ ಮೆಡಿಕಲ್ ಸ್ಟೋರ್ ನಲ್ಲಿ ಹುಡುಗಿಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ.

ಆರೋಪಿಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿರುವುದಾಗಿ ಬಾಲಕಿಯ ಕುಟುಂಬದವರು ಹೇಳಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 328, 376, ಮತ್ತು ಪೋಕ್ಸೋ ಕಾಯ್ದೆಯ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತೆ ಕೋಚಿಂಗ್ ತರಗತಿಗಳಿಗೆ ತೆರಳಿ ಮನೆಗೆ ಹಿಂತಿರುಗದಿದ್ದಾಗ, ಆಕೆಯ ತಂದೆ ಮತ್ತು ಸಹೋದರ ಅವಳನ್ನು ಹುಡುಕಲು ಹೊರಟಿದ್ದಾರೆ. ಆಕೆಯ ಸ್ನೇಹಿತರು ಮೆಡಿಕಲ್ ಸ್ಟೋರ್‌ನಲ್ಲಿ ಹುಡುಗನೊಂದಿಗೆ ಮಾತನಾಡುವುದನ್ನು ನೋಡಿದ್ದಾಗಿ ಕುಟುಂಬದವರಿಗೆ ತಿಳಿಸಿದ್ದಾರೆ. ಬಾಲಕಿಯ ತಂದೆ ಅಂಗಡಿಗೆ ಧಾವಿಸಿದಾಗ, ಅಂಗಡಿ ಮುಚ್ಚಿರುವುದನ್ನು ಕಂಡಿದ್ದಾರೆ. ಆದರೆ ಲೈಟ್ ಗಳು ಆನ್ ಆಗಿದ್ದವು. ಸಂತ್ರಸ್ತೆಯ ತಂದೆ ಜೋರಾಗಿ ಬಡಿದಾಗ ಹುಡುಗ ಶಟರ್ ತೆರೆದಿದ್ದಾನೆ. ಅಂಗಡಿಯೊಳಗೆ ನೋಡಿದಾಗ, ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಮತ್ತು ಆಕೆಯ ಬಟ್ಟೆಗಳು ಅಸ್ತವ್ಯಸ್ತಗೊಂಡಿದ್ದನ್ನು ಕಂಡು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...