alex Certify ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ, ಕೇಂದ್ರದ ಖಡಕ್‌ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ, ಕೇಂದ್ರದ ಖಡಕ್‌ ಎಚ್ಚರಿಕೆ

ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ ಎಂದು ಕೇಂದ್ರ ಅರಣ್ಯ ಸಚಿವಾಲಯ ಡೆಹ್ರಾಡೂನ್ ಪ್ರಾದೇಶಿಕ ಕಚೇರಿಗೆ ಖಡಕ್ ಎಚ್ಚರಿಕೆ ನೀಡಿದೆ‌. ಜೊತೆಗೆ ಕಾರ್ಬೆಟ್ ನಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವ ಮತ್ತು ನಿರ್ಮಾಣಗಳಲ್ಲಿ ತೊಡಗಿರುವ ಅಪರಾಧಿಗಳ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಸೂಚಿಸಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ತಂಡವು ನಡೆಸಿದ ಕ್ಷೇತ್ರ ಪರಿಶೀಲನೆಯಲ್ಲಿ, ಕಾರ್ಬೆಟ್ ನ ಬಫರ್ ಝೋನ್‌ನಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುವುದು, ಕಾಂಕ್ರೀಟ್ ನಿಂದ ನಿರ್ಮಾಣವಾದ ಹಲವು ರಚನೆಗಳು ಮತ್ತು ಜಲಮೂಲಗಳ ನಿರ್ಮಾಣ ಕಂಡುಬಂದಿದೆ. ಕಲಗಾರ್ ಮೊಘಟ್ಟಿ ಹಾಗೂ ಪಖ್ರೋ ಪ್ರದೇಶದಲ್ಲಿ ಈ ನಿರ್ಮಾಣಗಳು ಕಂಡುಂದಿವೆ‌. ಇದರಿಂದ ಅರಣ್ಯ ಸಂರಕ್ಷಣಾ ಕಾಯಿದೆ, 1980, ವನ್ಯಜೀವಿ (ರಕ್ಷಣೆ) ಕಾಯಿದೆ, 1972 ಮತ್ತು ಭಾರತೀಯ ಅರಣ್ಯ ಕಾಯಿದೆ, 1972 ರ ಉಲ್ಲಂಘನೆಯಾಗಿದೆ, ಹಾಗಾಗಿ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಆದೇಶಿಸಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಕಳುಹಿಸಿದ ವರದಿಯನ್ನು ಪರಿಶೀಲಿಸಿದ ನಂತರ, ಸಚಿವಾಲಯವು ಡಿಸೆಂಬರ್ 22 ರಂದು ಡೆಹ್ರಾಡೂನ್ ಕಚೇರಿಗೆ ಪತ್ರ ಬರೆದಿದೆ.

ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಸೆಕ್ಷನ್ 3A ಮತ್ತು 3B ಅಡಿಯಲ್ಲಿ ದೂರು ದಾಖಲಿಸಿಕೊಂಡು, ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಉಲ್ಲೇಖಿಸಿದೆ‌. ಇಂದು ಪತ್ರದ ಪ್ರತಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆನಂದ್ ಬರ್ಧನ್ ಮತ್ತು ಉತ್ತರಾಖಂಡದ ಅರಣ್ಯ ಪಡೆ ಮುಖ್ಯಸ್ಥ ವಿನೋದ್ ಕುಮಾರ್ ಅವರಿಗೆ ಕ್ರಮಕ್ಕಾಗಿ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...