alex Certify ಅಲೋಪಥಿ ಔಷಧಿ ನೀಡಲು ಆಯುರ್ವೇದ ವೈದ್ಯರಿಗೆ ಗ್ರೀನ್‌ ಸಿಗ್ನಲ್:‌ ಉತ್ತರಾಖಂಡ್‌ ಸರ್ಕಾರದಿಂದ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲೋಪಥಿ ಔಷಧಿ ನೀಡಲು ಆಯುರ್ವೇದ ವೈದ್ಯರಿಗೆ ಗ್ರೀನ್‌ ಸಿಗ್ನಲ್:‌ ಉತ್ತರಾಖಂಡ್‌ ಸರ್ಕಾರದಿಂದ ಮಹತ್ವದ ನಿರ್ಧಾರ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಯುರ್ವೇದ ವೈದ್ಯರು ಅಲೋಪಥಿ ಔಷಧಿಗಳನ್ನ ರೋಗಿಗಳಿಗೆ ಶಿಫಾರಸು ಮಾಡಬಹುದು ಎಂದು ಆಯುರ್ವೇದ ವೈದ್ಯರಿಗೆ ಉತ್ತರಾಖಂಡ್ ಸರ್ಕಾರ ಅನುಮತಿ ನೀಡಿದೆ. ಆದರೆ ಉತ್ತರಾಖಂಡ್​ನ ಈ ನಿರ್ಧಾರವನ್ನ ಸ್ವತಃ ಭಾರತೀಯ ವೈದ್ಯಕೀಯ ಸಂಘ, ಕಾನೂನು ಬಾಹಿರ ಎಂದು ಕರೆದಿದೆ.

ಉತ್ತರಾಖಂಡ್​ ಸರ್ಕಾರದ ಮಹತ್ವದ ಘೋಷಣೆಯ ವಿಚಾರವಾಗಿ ಮಾತನಾಡಿದ ರಾಜ್ಯ ಆಯುಷ್​ ಸಚಿವ ಹಾರಕ್​ ಸಿಂಗ್​, ಆಯುರ್ವೇದ ವೈದ್ಯರು ಬಹಳ ಸಮಯದಿಂದ ಇಟ್ಟಿದ್ದ ಬೇಡಿಕೆಗೆ ಸಿಎಂ ತಿರಥ್​ ಸಿಂಗ್​ ಹಸಿರು ನಿಶಾನೆ ತೋರಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರೋಗಿಗಳಿಗೆ ಅಲೋಪಥಿ ಔಷಧಿಗಳನ್ನ ನೀಡುವ ಬಗ್ಗೆ ಆಯುರ್ವೇದ ವೈದ್ಯರು ಬಹುಕಾಲದಿಂದ ಇಟ್ಟ ಬೇಡಿಕೆಗೆ ನಾವು ಸಮ್ಮತಿ ನೀಡಿದ್ದೇವೆ. ಸರ್ಕಾರದ ಈ ಕ್ರಮದಿಂದಾಗಿ ಆರೋಗ್ಯ ಸೇವೆಗಳು ಇನ್ನಷ್ಟು ಸುಧಾರಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ರು.

ಉತ್ತರಾಖಂಡ್​ ಸರ್ಕಾರದ ಈ ಕ್ರಮವನ್ನ ವಿರೋಧಿಸಿ ಮಾತನಾಡಿದ ಉತ್ತರಾಖಂಡ್​ ಐಎಂಎ ಅಧ್ಯಕ್ಷ ಡಾ. ಅರವಿಂದ್​ ವರ್ಮಾ, ಸರ್ಕಾರದ ಈ ನಿರ್ಧಾರವು ವಿವಾದಾತ್ಮಕವಾಗಿದೆ. ಆಯುರ್ವೇದ ವೈದ್ಯರು ಅಲೋಪತಿ ಔಷಧಿಗಳನ್ನ ಕೊಡಬಹುದು ಅಂದಮೇಲೆ ಅಲೋಪತಿಯ ಬಗ್ಗೆ ಪ್ರಶ್ನೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಉತ್ತರಾಖಂಡ್​ ಐಎಂಎ ಪ್ರಧಾನ ಕಾರ್ಯದರ್ಶಿ ಡಾ. ಅಜಯ್​ ಖನ್ನಾ, ಸರ್ಕಾರದ ಈ ನಿರ್ಧಾರವು ಸಂಪೂರ್ಣ ಕಾನೂನು ಬಾಹಿರವಾಗಿದೆ ಎಂದು ಹೇಳಿದ್ದಾರೆ.

ಯೋಗ ಬಾಬಾ ರಾಮದೇವ್​ ಅಲೋಪತಿ ಒಂದು ಮೂರ್ಖ ವಿಜ್ಞಾನವಾಗಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಆಯುರ್ವೇದ ಹಾಗೂ ಅಲೋಪಥಿ ವೈದ್ಯ ಪದ್ಧತಿಯ ಬಗ್ಗೆ ದೇಶದಲ್ಲಿ ಭಾರೀ ಚರ್ಚೆ ಶುರುವಾಗಿತ್ತು. ಬಾಬಾ ರಾಮದೇವ್​ ಕೋವಿಡ್​ ರೋಗಿಗಳ ಚಿಕಿತ್ಸೆಯಲ್ಲಿ ರೆಮಿಡಿಸಿವರ್​ನಂತಹ ಔಷಧಿಗಳೇ ವಿಫಲವಾಗಿದೆ ಎಂದು ಆರೋಪಿಸಿದ್ದರು. ಬಾಬಾ ರಾಮ್​ದೇವ್​ ಆರೋಪಗಳ ವಿರುದ್ಧ ಉತ್ತರಾಖಂಡ್​ ವೈದ್ಯಕೀಯ ಸಂಘ ಮಾನನಷ್ಟ ಮೊಕದ್ದಮೆ ಹೂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...