alex Certify BIG NEWS: ಉತ್ತರಾಖಂಡ ವಿಧಾನಸಭೆಯಲ್ಲಿಂದು ಏಕರೂಪ ನಾಗರಿಕ ಸಂಹಿತೆ ಮಂಡನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉತ್ತರಾಖಂಡ ವಿಧಾನಸಭೆಯಲ್ಲಿಂದು ಏಕರೂಪ ನಾಗರಿಕ ಸಂಹಿತೆ ಮಂಡನೆ

ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ವಿಧೇಯಕ ಮಂಡಿಸಲಿದ್ದು, ಸದನದಲ್ಲಿ ನಿರ್ಣಾಯಕ ಮಸೂದೆಯ ಚರ್ಚೆ ನಡೆಯಲಿದೆ.

ಭಾನುವಾರ ಉತ್ತರಾಖಂಡ ಕ್ಯಾಬಿನೆಟ್ ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡನ್ನು ಅನುಮೋದಿಸಿತು, ಸೋಮವಾರದಿಂದ ಪ್ರಾರಂಭವಾಗುವ ವಿಶೇಷ ನಾಲ್ಕು ದಿನಗಳ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅದರ ಮಂಡನೆಗೆ ದಾರಿ ಮಾಡಿಕೊಟ್ಟಿದೆ.

ಸೋಮವಾರ ಯುಸಿಸಿಯ ವಿಶೇಷ ಅಧಿವೇಶನ ಪ್ರಾರಂಭವಾಗುವ ಮೊದಲು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಎಲ್ಲಾ ವರ್ಗಗಳ ಒಳಿತಿಗಾಗಿ ಯುಸಿಸಿ ಜಾರಿ ಮಾಡಲಾಗುವುದು. ಸದನದಲ್ಲಿ ಸದಸ್ಯರು ಮಸೂದೆ ಬಗ್ಗೆ ಚರ್ಚಿಸಲಿ ಎಂದು ಒತ್ತಾಯಿಸಿದರು.

ಯುಸಿಸಿಯ ಮೇಲಿನ ಶಾಸನವನ್ನು ಅಂಗೀಕರಿಸಲು ಮತ್ತು ಅದನ್ನು ಕಾಯಿದೆಯನ್ನಾಗಿ ಮಾಡಲು ವಿಶೇಷವಾಗಿ ವಿಧಾನಸಭೆಯ ಅಧಿವೇಶನವನ್ನು ಕರೆಯಲಾಗಿದೆ. ವಿಧಾನಸಭೆಯಲ್ಲಿ ಕರಡು ಮಂಡಿಸಲು ಸಂಪುಟದ ಅನುಮೋದನೆ ಅಗತ್ಯವಿತ್ತು.

ವಿಧಾನಸಭೆ ಸುತ್ತಮುತ್ತ ಭದ್ರತೆ ಹೆಚ್ಚಳ

ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ. ಹಿಂದಿನಂತೆ ಯಾವುದೇ ಪ್ರತಿಭಟನೆಗಳನ್ನು ತಡೆಯಲು ನಾವು ವಿಧಾನಸಭೆಯ ಸುತ್ತಲೂ ಪ್ರವೇಶ ದ್ವಾರಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದೇವೆ. ವಿಧಾನಸಭೆಯ ಪರಿಧಿಯಲ್ಲಿ 200 ಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳು ಮತ್ತು 100 ಇನ್‌ಸ್ಪೆಕ್ಟರ್‌ಗಳನ್ನು ಇರಿಸಲಾಗಿದೆ. ನಗರದ ಸೂಕ್ಷ್ಮ ಸ್ಥಳಗಳಲ್ಲಿ ಮೊಬೈಲ್ ಗಸ್ತು ಹೆಚ್ಚಿಸಲಾಗಿದೆ ಎಂದು ಡೆಹ್ರಾಡೂನ್‌ನ ಹಿರಿಯ ಪೊಲೀಸ್ ಅಧೀಕ್ಷಕ ಅಜಯ್ ಸಿಂಗ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...