alex Certify ಭಾರತೀಯ ವಧುವಾಗಿ ಕಂಗೊಳಿಸಿದ ಬ್ರಿಟನ್ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ವಧುವಾಗಿ ಕಂಗೊಳಿಸಿದ ಬ್ರಿಟನ್ ಅಧಿಕಾರಿ

ಭಾರತೀಯ ಮದುಮಗಳಾಗಿ ಮಿಂಚುತ್ತಿರುವ ಬ್ರಿಟನ್ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಚಿತ್ರವೊಂದು ದೇಶಿ ನೆಟ್ಟಿಗರ ಹೃದಯ ಗೆದ್ದಿದೆ.

ದಕ್ಷಿಣ ಏಷ್ಯಾದ ಪ್ರದೇಶದ ವಾಣಿಜ್ಯ ಉಪ ಆಯುಕ್ತರಾಗಿರುವ ರಿಯಾನ್ ಹ್ಯಾರಿಸ್ ಹೀಗೆ ದೇಶಿ ವಧುವಿನ ಗೆಟಪ್‌ನಲ್ಲಿ ಮಿಂಚಿದ್ದಾರೆ. ಥೇಟ್ ಉತ್ತರ ಭಾರತೀಯ ವಧುವಿನಂತೆ ಕಾಣುವ ಈಕೆ, ಚುನ್ರಿ ಜೊತೆಗೆ ಕೆಂಪು ಲೆಹಂಗಾ ಸೆಟ್ ಹಾಗೂ ಅದಕ್ಕೆ ಹೋಲುವ ಸಾಂಪ್ರದಾಯಿಕ ಒಡವೆಗಳನ್ನು ಧರಿಸಿದ್ದಾರೆ.

BIG NEWS: ಈಶ್ವರಪ್ಪ ಹರಕುಬಾಯಿ ದಾಸ, ಅದು ಬಚ್ಚಲು ಬಾಯಿ; ಮತ್ತೆ ಕಿಡಿಕಾರಿದ ಬಿ.ಕೆ.ಹರಿಪ್ರಸಾದ್

ತನ್ನ ಪತಿಯ ಕೈ ಹಿಡಿದು ಕುಳಿತ ಈ ಮದುಮಗಳು ಭಾರೀ ಮುದ್ದಾಗಿ ಕಾಣುತ್ತಿದ್ದಾರೆ. ಆಕೆಯ ಪತಿ ಕ್ರೀಂ ಬಣ್ಣದ ಶೇರ್ವಾನಿ ಸೆಟ್ ಹಾಗೂ ಕೆಂಪು ಟರ್ಬನ್‌ನಲ್ಲಿ ಮಿಂಚುತ್ತಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ತಾವೊಬ್ಬರೇ ಬಂದ ವೇಳೆ ತಮ್ಮ ಜೀವನ ಸಂಗಾತಿ ಇಲ್ಲಿಯವರೇ ಸಿಗಲಿದ್ದಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಹೇಳುವ ರೆಯಾನಾನ್, “ಇಲ್ಲಿ ಕಳೆಯುವ ಅವಧಿಯ ಬಗ್ಗೆ ಬಹಳ ಆಸೆಗಳು ಹಾಗೂ ಕನಸುಗಳನ್ನು ಕಂಡಿದ್ದೆ. ಆದರೆ ನನ್ನ ಜೀವನ ಸಂಗಾತಿಯನ್ನು ಇಲ್ಲಿಯೇ ಭೇಟಿ ಮಾಡಿ ಮದುವೆಯಾಗುತ್ತೇನೆ ಎಂದು ಎಂದೂ ಅಂದುಕೊಂಡಿರಲಿಲ್ಲ. ಭಾರತದಲ್ಲಿ ನನಗೆ ಅಂಥ ಸಂತಸ ಸಿಕ್ಕಿದೆ. ಇದು ನನಗೆ ಸದಾ ಮನೆಯಾಗಿರಲಿದೆ,” ಎಂದು ರಿಯಾನಾನ್ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...