alex Certify mAadhaar ನ ಲೇಟೆಸ್ಟ್‌ ʼವರ್ಶನ್‌ʼನಲ್ಲಿದೆ ಇಷ್ಟೆಲ್ಲಾ ಆಯ್ಕೆ…! ಇಲ್ಲಿದೆ ಕಂಪ್ಲೀಟ್‌ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

mAadhaar ನ ಲೇಟೆಸ್ಟ್‌ ʼವರ್ಶನ್‌ʼನಲ್ಲಿದೆ ಇಷ್ಟೆಲ್ಲಾ ಆಯ್ಕೆ…! ಇಲ್ಲಿದೆ ಕಂಪ್ಲೀಟ್‌ ವಿವರ

ಎಂಆಧಾರ್‌ ಮೊಬೈಲ್ ಅಪ್ಲಿಕೇಶನ್‌ನ ಲೇಟೆಸ್ಟ್ ವರ್ಶನ್ ಡೌನ್ಲೋಡ್ ಮಾಡಲು ಲಭ್ಯವಿದ್ದು, ಆಂಡ್ರಾಯ್ಡ್ ಹಾಗೂ ಐಫೋನ್‌‌ ಬಳಕೆದಾರರು ಈ ಹೊಸ ವರ್ಶನ್‌ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

ಇದಕ್ಕಾಗಿ ಹಳೆಯ ವರ್ಶನ್‌ನ ಎಂಆಧಾರ್‌ ಅನ್ನು ಅನ್‌ಇನ್‌ಸ್ಟಾಲ್ ಮಾಡಿಕೊಂಡು ಹೊಸ ವರ್ಶನ್‌ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

“ಎಂಆಧಾರ್‌‌ ಅಪ್ಲಿಕೇಶನ್‌‌ನ ಹೊಸ ಹಾಗೂ ಅಪ್ಡೇಟೆಡ್ ಫೀಚರ್‌ಗಳನ್ನು ಅನುಭವಿಸಲು ಹಿಂದಿನ ವರ್ಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿಕೊಂಡು, ಹೊಸ ವರ್ಶನ್‌ಅನ್ನು ಇವುಗಳ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ:

https://tinyurl.com/yx32kkeq (ಆಂಡ್ರಾಯ್ಡ್‌)

https://tinyurl.com/taj87tg (ಐಓಎಸ್‌),” ಎಂದು ಆಧಾರ್‌ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಲಾಗಿದೆ.

ಈ ಅಪ್ಲಿಕೇಶನ್ ಮೂಲಕ ಹಲವು ಪ್ರಯೋಜನಗಳಿವೆ:

* ಡೌನ್ಲೋಡ್ ಅಥವಾ ಆಧಾರ್‌‌ನ ಮರುಪ್ರಿಂಟಿಂಗ್‌ಗೆ ಆರ್ಡರ್‌ ಮಾಡುವ ಮೂಲಕ ಕಳೆದುಹೋದ ಆಧಾರ್‌‌ ಕಾರ್ಡ್‌ ಅನ್ನು ಮರಳಿ ಪಡೆಯಲು ಯತ್ನಿಸಬಹುದು.

* ಆಧಾರ್‌ ಅನ್ನು ಆಫ್ಲೈನ್ ಮೋಡ್‌ ನಲ್ಲೂ ವೀಕ್ಷಿಸಬಹುದಾಗಿದ್ದು, ಗುರುತಿನ ಚೀಟಿ ತೋರಲು ಇದು ನೆರವಾಗುತ್ತದೆ.

* ಆಧಾರ್‌‌ನಲ್ಲಿ ವಿಳಾಸದ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು.

* ಒಂದೇ ಮೊಬೈಲ್‌ನಲ್ಲಿ ಕುಟುಂಬವೊಂದರ ಐವರ ಆಧಾರ್‌ ವ್ಯವಹಾರಗಳನ್ನು ನಿಭಾಯಿಸಬಹುದು.

* ಕಾಗದರಹಿತ ಇಕೆವೈಸಿ ಅಥವಾ ಕ್ಯೂಆರ್‌ ಕೋಡ್‌ ಅನ್ನು ಸೇವಾದಾರ ಏಜೆನ್ಸಿಗಳಿಗೆ ಶೇರ್‌ ಮಾಡಬಹುದು.

* ಈ ಅಪ್ಲಿಕೇಶನ್ ಮೂಲಕ ಆಧಾರ್ ಅಥವಾ ಬಯೋಮೆಟ್ರಿಕ್ಸ್‌ ಅನ್ನು ಲಾಕ್ ಮಾಡಬಹುದು.

* ಆಧಾರ್‌ ಬದಲು ಬಳಸಬಹುದಾದ ವಿಐಡಿಯನ್ನು ಸೃಷ್ಟಿಸಿ, ಆಧಾರ್‌ ಸೇವೆಗಳನ್ನು ಪಡೆಯಬಹುದು.

* ಆಫ್ಲೈನ್ ಮೋಡ್‌ನಲ್ಲಿ ನಿವಾಸಿಯೊಬ್ಬರು ಆಧಾರ್‌ ಎಸ್‌ಎಂಎಸ್‌ ಸೇವೆಗಳನ್ನು ಬಳಸಬಹುದು.

* ಆಧಾರ್‌‌ನ ಮರುಪ್ರಿಟಿಂಗ್ ಅಥವಾ ಮಾಹಿತಿ ಅಪ್ಡೇಟ್‌ಗೆ ಆರ್ಡರ್‌ ಮಾಡಿದ ಬಳಿಕ ಸೇವಾ ವಿನಂತಿಯ ಸ್ಟೇಟಸ್‌ ಅನ್ನು ಪರೀಕ್ಷಿಸಬಹುದು.

* ಸಾಮಾನ್ಯ ಸೇವೆಗಳ ಮೂಲಕ ಸ್ಮಾರ್ಟ್‌ಫೋನ್ ಇಲ್ಲದ ಮಂದಿಗೆ ಆಧಾರ್‌ ಪಡೆಯಲು ಸಹಾಯ ಮಾಡಬಹುದು.

* ಅಪ್ಡೇಟ್ ಹಿಸ್ಟರಿ ಹಾಗೂ ಅಥೆಂಟಿಕೇಶನ್ ದಾಖಲೆಗಳನ್ನು ಪಡೆಯಬಹುದು.

ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ uidai.gov.in ಜಾಲತಾಣಕ್ಕೆ ಭೇಟಿ ಕೊಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...