alex Certify ಶಿಕ್ಷಕರ ದಿನದಂದೇ 5 ಹೊಸ ಯೋಜನೆ ಪ್ರಾರಂಭಿಸಿದ ಯುಜಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕರ ದಿನದಂದೇ 5 ಹೊಸ ಯೋಜನೆ ಪ್ರಾರಂಭಿಸಿದ ಯುಜಿಸಿ

ನವದೆಹಲಿ: ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ) ಶಿಕ್ಷಕರ ದಿನದ ಸಂದರ್ಭದಲ್ಲಿ ಹೊಸ ಸಂಶೋಧನಾ ಫೆಲೋಶಿಪ್ ಮತ್ತು ಸಂಶೋಧನಾ ಅನುದಾನ ಯೋಜನೆಗಳನ್ನು ಪ್ರಾರಂಭಿಸಿದೆ.

ಒಂಟಿ ಹೆಣ್ಣು ಮಗುವಿಗೆ ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ ಫೆಲೋಶಿಪ್, ಡಾ ರಾಧಾಕೃಷ್ಣನ್ ಯುಜಿಸಿ ಪೋಸ್ಟ್-ಡಾಕ್ಟರಲ್ ಫೆಲೋಶಿಪ್, ಸೂಪರ್ ಅನ್ಯುಯೇಟೆಡ್ ಫ್ಯಾಕಲ್ಟಿ ಸದಸ್ಯರ ಫೆಲೋಶಿಪ್, ಇನ್-ಸರ್ವಿಸ್ ಫ್ಯಾಕಲ್ಟಿ ಸದಸ್ಯರಿಗೆ ಸಂಶೋಧನಾ ಅನುದಾನ ಮತ್ತು ಹೊಸದಾಗಿ ನೇಮಕಗೊಂಡ ಅಧ್ಯಾಪಕ ಸದಸ್ಯರಿಗೆ ಡಾ.ಡಿ.ಎಸ್. ಕೊಠಾರಿ ಸಂಶೋಧನಾ ಅನುದಾನ ನೀಡಲಾಗುವುದು.

ಈ ಸಂದರ್ಭದಲ್ಲಿ ಮಾತನಾಡಿದ ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್, ಯುಜಿಸಿಯು ದೇಶಾದ್ಯಂತ ಇರುವ ವಿಶ್ವವಿದ್ಯಾನಿಲಯಗಳಲ್ಲಿ ರಿಸೀಚ್ ಎಕೋಸಿಸ್ಟಮ್ ಸಕ್ರಿಯಗೊಳಿಸಲು ವಿವಿಧ ರೀತಿಯ ಫೆಲೋಶಿಪ್‌ನಲ್ಲಿ ಕಾಲಕಾಲಕ್ಕೆ ಸಂಶೋಧನಾ ಅನುದಾನ ನೀಡುತ್ತಿದೆ. ಈ ಎಲ್ಲಾ ಯೋಜನೆಗಳನ್ನು ಪರಿಶೀಲಿಸಲು, ಮರುಪರಿಶೀಲನೆ ಮತ್ತು ಫೆಲೋಶಿಪ್ ಯೋಜನೆಗಳ ಮೇಲೆ ಹೆಚ್ಚು ಗಮನ ಹರಿಸಲು ಯುಜಿಸಿ ಈ ಹಿಂದೆ ಸಮಿತಿಯನ್ನು ರಚಿಸಿತ್ತು. ಶಿಕ್ಷಕರ ದಿನಾಚರಣೆ ದಿನ ಈ 5 ಯೋಜನೆಗಳನ್ನು ಇಂದು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...