alex Certify Uber ಇಂಡಿಯಾದ ಪ್ರೀಮಿಯಂ ಸೇವೆಗೆ 25,000 EV ಗಳ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Uber ಇಂಡಿಯಾದ ಪ್ರೀಮಿಯಂ ಸೇವೆಗೆ 25,000 EV ಗಳ ಸೇರ್ಪಡೆ

ಬೆಂಗಳೂರು: ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಮತ್ತು ಭಾರತದ EV ವಿಕಸನದ ಪ್ರವರ್ತಕನಾಗಿರುವ ಟಾಟಾ ಮೋಟಾರ್ಸ್, 25,000 XPRES-T EV ಗಳನ್ನು ತಮ್ಮ ಪ್ರೀಮಿಯಂ ವರ್ಗದ ಸೇವೆಗೆ ತರಲು ಭಾರತದ ಪ್ರಮುಖ ರೈಡ್‌ಶೇರಿಂಗ್ ಅಪ್ಲಿಕೇಶನ್‌ ಆಗಿರುವ Uber ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ತಮ್ಮ ಸ್ವಚ್ಛ ಮತ್ತು ಹಸಿರು ಪರಿಸರದ ಗುರಿಗೆ ಅನುಗುಣವಾಗಿ, ಟಾಟಾ ಮೋಟಾರ್ಸ್ ದೆಹಲಿ NCR, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಅಹಮದಾಬಾದ್‌ ನಗರಗಳಲ್ಲಿ ತಮ್ಮ ಸೇವೆಗಳನ್ನು ವಿದ್ಯುದ್ದೀಕರಿಸುವಲ್ಲಿ Uber ಗೆ ಸಹಾಯ ಮಾಡಲಿದೆ. ಕಂಪನಿಯು Uber ಫ್ಲೀಟ್ ಪಾಲುದಾರರಿಗೆ ಕಾರುಗಳ ವಿತರಣೆಯನ್ನು ಹಂತ ಹಂತವಾಗಿ ಈ ತಿಂಗಳಿನಿಂದ ಪ್ರಾರಂಭಿಸುತ್ತದೆ.

ಒಪ್ಪಂದಕ್ಕೆ ಸಹಿ ಮಾಡುವಾಗ ಮಾತನಾಡಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ MD ಶೈಲೇಶ್ ಚಂದ್ರ, “ದೇಶದಲ್ಲಿ ಸುಸ್ಥಿರ ಚಲನಶೀಲತೆಯನ್ನು ಬೆಳೆಸುವ ನಮ್ಮ ಬದ್ಧತೆಗೆ ಅನುಗುಣವಾಗಿ, ಭಾರತದ ಪ್ರಮುಖ ರೈಡ್‌ಶೇರಿಂಗ್ ಪ್ಲಾಟ್‌ಫಾರ್ಮ್ Uber ನೊಂದಿಗೆ ಪಾಲುದಾರರಾಗಲು ನಮಗೆ ಸಂತೋಷವಾಗಿದೆ. Uber ನ ಪ್ರೀಮಿಯಂ ವರ್ಗದ ಸೇವೆಯ ಮೂಲಕ ನಮ್ಮ ಪರಿಸರ ಸ್ನೇಹಿ EV ಸವಾರಿಯ ಅನುಭವಗಳನ್ನು ಗ್ರಾಹಕರಿಗೆ ನೀಡುವುದರಿಂದ ಹಸಿರು ಮತ್ತು ಸ್ವಚ್ಛವಾದ ವೈಯಕ್ತಿಕ ರೈಡ್ ಹಂಚಿಕೆಯನ್ನು ಅಳವಡಿಸಿಕೊಳ್ಳುವುದನ್ನು ವೇಗಗೊಳಿಸುತ್ತದೆ.

XPRES-T EV ಗ್ರಾಹಕರಿಗೆ ಮತ್ತು ಆಪರೇಟರ್ ಗಳಿಗೆ ಅತ್ಯಂತ ಆಕರ್ಷಕ ಆಯ್ಕೆಯಾಗಿದೆ. ವರ್ಧಿತ ಸುರಕ್ಷತೆ, ನಿಶ್ಯಬ್ದ ಮತ್ತು ಕ್ಯಾಬಿನ್ನೊಳಗಿನ ಪ್ರೀಮಿಯಂ ಅನುಭವಗಳೊಂದಿಗೆ ಗ್ರಾಹಕರಿಗೆ ಆರಾಮದ ಸವಾರಿಯನ್ನು ನೀಡುತ್ತದೆ. ವೇಗದ ಚಾರ್ಜಿಂಗ್ ಪರಿಹಾರ, ಡ್ರೈವಿಂಗ್ ಸೌಕರ್ಯ ಮತ್ತು EV ಯ ಲಾಭದಾಯಕತೆಯು ನಮ್ಮ ಫ್ಲೀಟ್ ಪಾಲುದಾರರಿಗೆ ಆಕರ್ಷಕ ಉದ್ಯಮ ಪ್ರತಿಪಾದನೆಯಾಗಿದೆ. ಈ ಪಾಲುದಾರಿಕೆಯು ಫ್ಲೀಟ್ ವಿಭಾಗದಲ್ಲಿ ನಮ್ಮ ಮಾರುಕಟ್ಟೆ ಸ್ಥಾನವನ್ನು ಮತ್ತಷ್ಟು ಭದ್ರಪಡಿಸುತ್ತದೆ.” ಎಂದರು.

ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷರಾದ ಪ್ರಭಜೀತ್ ಸಿಂಗ್, “ಭಾರತಕ್ಕೆ ಸುಸ್ಥಿರ, ಪಾಲುದಾರಿಕೆಯ ಚಲನಶೀಲತೆಯನ್ನು ತರಲು Uber ಬದ್ಧವಾಗಿದೆ ಮತ್ತು ಆ ಪ್ರಯಾಣದಲ್ಲಿ ಟಾಟಾ ಮೋಟಾರ್ಸ್‌ನೊಂದಿಗಿನ ಈ ಪಾಲುದಾರಿಕೆಯು ಪ್ರಮುಖ ಮೈಲಿಗಲ್ಲಾಗಿದೆ. ಇದು ಭಾರತದಲ್ಲಿ ವಾಹನ ತಯಾರಕ ಮತ್ತು ರೈಡ್‌ಶೇರಿಂಗ್ ಪ್ಲಾಟ್‌ಫಾರ್ಮ್ ನಡುವಿನ ಅತಿದೊಡ್ಡ EV ಪಾಲುದಾರಿಕೆಯನ್ನು ಪ್ರತಿನಿಧಿಸುತ್ತದೆ. ನಾವು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರೆ, ಇದು Uber ಪ್ಲಾಟ್‌ಫಾರ್ಮ್‌ನಲ್ಲಿ ಶೂನ್ಯ ಹೊರಸೂಸುವಿಕೆಯ ಕಡೆಗಿನ ಪರಿವರ್ತನೆಯನ್ನು ಸೂಪರ್ಚಾರ್ಜ್ ಮಾಡುತ್ತದೆ. ಬದಲಾವಣೆಯನ್ನು ಮುನ್ನಡೆಸುತ್ತಿರುವ ಉದ್ಯಮ ಪಾಲುದಾರರೊಂದಿಗೆ ಕೆಲಸ ಮಾಡುವ ಮೂಲಕ ವಿದ್ಯುದೀಕೃತವಾಗುವ ಅಡೆತಡೆಗಳನ್ನು ಕಡಿಮೆ ಮಾಡಲು ನಮ್ಮ ಪಾತ್ರವನ್ನು ಮಾಡಲು ನಾವು ಬದ್ಧರಾಗಿದ್ದೇವೆ ” ಎಂದರು.

ಟಾಟಾ ಮೋಟಾರ್ಸ್, ಜುಲೈ 2021 ರಲ್ಲಿ, ಫ್ಲೀಟ್ ಗ್ರಾಹಕರಿಗೆ ಪ್ರತ್ಯೇಕವಾಗಿ ‘XPRES’ ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡಿತು ಮತ್ತು XPRES-T EV ಈ ಬ್ರಾಂಡ್ ಅಡಿಯಲ್ಲಿ ಮೊದಲ ವಾಹನವಾಗಿದೆ. ಹೊಸ XPRES-T ಎಲೆಕ್ಟ್ರಿಕ್ ಸೆಡಾನ್ 2 ಶ್ರೇಣಿಯ ಆಯ್ಕೆಗಳೊಂದಿಗೆ ಬರುತ್ತದೆ – 315 km ಮತ್ತು 277 km (ಪರೀಕ್ಷಾ ಪರಿಸ್ಥಿತಿಗಳಲ್ಲಿ ARAI ಪ್ರಮಾಣೀಕೃತ ಶ್ರೇಣಿ).

ಇದು 26 kWh ಮತ್ತು 25.5 kWh ನ ಹೈ ಎನರ್ಜಿ ಡೆನ್ಸಿಟಿ ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು ಕ್ರಮವಾಗಿ 59 ನಿಮಿಷಗಳು ಮತ್ತು 110 ನಿಮಿಷಗಳಲ್ಲಿ 0- 80% ರಿಂದ ಚಾರ್ಜ್ ಆಗುತ್ತದೆ, ಇದನ್ನು ಸುಲಭವಾಗಿ ಲಭ್ಯವಿರುವ ಮತ್ತು ಅನುಕೂಲಕರವಾದ ವೇಗದ ಚಾರ್ಜಿಂಗ್ ಬಳಸಿ ಅಥವಾ ಸಾಮಾನ್ಯವಾಗಿ ಯಾವುದೇ 15 A ಪ್ಲಗ್ ಪಾಯಿಂಟ್‌ನಿಂದ ಚಾರ್ಜ್ ಮಾಡಬಹುದಾಗಿದೆ.

ಇದು ಝೀರೋ ಟೈಲ್-ಪೈಪ್ ಎಮಿಷನ್, ಸಿಂಗಲ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ABS ಜೊತೆಗೆ EBD ನೊಂದಿಗೆ ವೇರಿಯಂಟ್‌ಗಳಾದ್ಯಂತ ಪ್ರಮಾಣಿತವಾಗಿ ಬರುತ್ತದೆ. ಸ್ಟ್ಯಾಂಡರ್ಡ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಬ್ಲೂ ಆಕ್ಸೆಂಟ್‌ಗಳನ್ನು ಹೊಂದಿರುವ ಪ್ರೀಮಿಯಂ ಇಂಟೀರಿಯರ್‌ಗಳು ಅದರ ಆಂತರಿಕ ಮತ್ತು ಬಾಹ್ಯಭಾಗಗಳಾದ್ಯಂತ ಇತರ ಟಾಟಾ ಕಾರುಗಳಿಗಿಂತ ವಿಭಿನ್ನ ಉಪಸ್ಥಿತಿಯನ್ನು ನೀಡುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...