alex Certify ವಾಟ್ಸಾಪ್​ ಮೂಲಕವೂ ಬುಕ್​ ಮಾಡಬಹುದು ಊಬರ್​ ರೈಡ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್​ ಮೂಲಕವೂ ಬುಕ್​ ಮಾಡಬಹುದು ಊಬರ್​ ರೈಡ್​​..!

ಊಬರ್​​​ನಲ್ಲಿ ಕ್ಯಾಬ್​ ಬುಕ್​ ಮಾಡುವ ಪ್ರಕ್ರಿಯೆ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇದೀಗ ಮೆಟಾ ಮಾಲೀಕತ್ವದ ವಾಟ್ಸಾಪ್​ ಮೂಲಕವೂ ನೀವು ಕ್ಯಾಬ್​ ಬುಕ್​ ಮಾಡುವ ಹೊಸದೊಂದು ವೈಶಿಷ್ಟ್ಯ ಜಾರಿಗೆ ದೇಶದಲ್ಲಿ ಶೀಘ್ರದಲ್ಲೇ ಜಾರಿಗೆ ಬರಲಿದೆ ಎನ್ನಲಾಗಿದೆ.

ಊಬರ್​ ಟೆಕ್ನಾಲಜಿ ಹಾಗೂ ಮೆಟಾ ಫ್ಲಾಟ್​ಫಾರಂ ಸಹಭಾಗಿತ್ವದಲ್ಲಿ ವಾಟ್ಸಾಪ್​​ ಚಾಟ್​ಬೋಟ್​​ಗೆ ಸಂದೇಶವನ್ನು ಕಳಿಸುವ ಊಬರ್​ನ ಮೊಬಿಲಿಟಿ ಸೇವೆಯು ಆರಂಭಗೊಳ್ಳಲಿದೆ. ಪ್ರಾರಂಭಿಕ ಹಂತದಲ್ಲಿ ಲಕ್ನೋದಲ್ಲಿ ಈ ಸೇವೆ ಆರಂಭಗೊಳ್ಳಲಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ಸೇವೆ ವಿಸ್ತರಣೆಗೊಳ್ಳಲಿದೆ ಎಂದು ಊಬರ್​ ತಿಳಿಸಿದೆ.

ಜಿಯೋ ಮಾರ್ಟ್​ನ ಜೊತೆಯಲ್ಲಿ ವಾಟ್ಸಾಪ್​ ಸಹಭಾಗಿತ್ವ ಹೊಂದಿದ ಬೆನ್ನಲ್ಲೇ ಈ ಬೆಳವಣಿಗೆ ಕೂಡ ಬಹಿರಂಗವಾಗಿದೆ. ಈ ಮೂಲಕ ವಾಟ್ಸಾಪ್​ ದೇಶದಲ್ಲಿ ತನ್ನ ಬಳಕೆದಾರರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಂದಾಜಿಸಬಹುದಾಗಿದೆ. ಮೆಟಾ ಮಾಲೀಕತ್ವದ ವಾಟ್ಸಾಪ್​ ಈಗಾಗಲೇ ಭಾರತದಲ್ಲಿ ಅರ್ಧ ಶತಕೋಟಿಗಿಂತಲೂ ಅಧಿಕ ಬಳಕೆದಾರರನ್ನು ಹೊಂದಿದೆ.

ಭಾರತೀಯರಿಗೆ ಊಬರ್​ ಸೇವೆ ಇನ್ನಷ್ಟು ಸುಲಭವಾಗಿ ಕೈಗೆ ಸಿಗಬೇಕು ಎಂದು ನಾವು ಬಯಸುತ್ತೇವೆ. ಇದೇ ಕಾರಣಕ್ಕಾಗಿ ಅನುಕೂಲಕರ ವೇದಿಕೆಗಳಲ್ಲಿ ಊಬರ್​ ಸೇವೆ ನೀಡುತ್ತಿದ್ದೇವೆ ಎಂದು ಊಬರ್​​ನ ಬ್ಯುಸಿನೆಸ್​ ಡೆವಲಪ್​ಮೆಂಟ್​​ ಹಿರಿಯ ನಿರ್ದೇಶಕಿ ನಂದಿನಿ ಮಾಹೇಶ್ವರಿ ಹೇಳಿದ್ದಾರೆ.

ಈ ಹೊಸ ಪ್ರಯತ್ನದಿಂದಾಗಿ ಜನತೆಗೆ ಇನ್ಮುಂದೆ ಊಬರ್​ ಅಪ್ಲಿಕೇಶನ್​ ಮೂಲಕವೇ ರೈಡ್​ ಬುಕ್​ ಮಾಡಬೇಕೆಂದು ಇರೋದಿಲ್ಲ. ವಾಟ್ಸಾಪ್​ ಬಳಕೆದಾರರು ಕೂಡ ಊಬರ್​ಗೆ ನೋಂದಣಿ ಮಾಡಿಕೊಂಡು ಸುಲಭವಾಗಿ ರೈಡ್​ ಬುಕ್​ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...