alex Certify ಹೀಗೊಂದು ವಿಚಿತ್ರ ಕಳ್ಳತನ ಪ್ರಕರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೊಂದು ವಿಚಿತ್ರ ಕಳ್ಳತನ ಪ್ರಕರಣ….!

ಏಪ್ರಿಲ್​ ತಿಂಗಳಿನಲ್ಲಿ ಅಡಿಲೇಡ್​​ನ ಸೆಸೇಮ್​ ಬೀದಿ ಸರ್ಕಸ್​​ನಲ್ಲಿ ಬರೋಬ್ಬರಿ 1,60,000 ಡಾಲರ್​ ಮೌಲ್ಯದ ಹಕ್ಕಿ ಮಾದರಿಯ ಉಡುಪು ಕಾಣೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಶೋಧ ಕಾರ್ಯವನ್ನ ಚುರುಕುಗೊಳಿಸಿದ್ರು ಹಾಗೂ ಕೇವಲ ಒಂದು ದಿನದಲ್ಲಿ ಈ ಉಡುಪನ್ನ ಪತ್ತೆ ಮಾಡಿದ್ದಾರೆ. ಆದರೆ ಈ ಉಡುಪಿನ ಜೊತೆಯಲ್ಲಿ ಟಿಪ್ಪಣಿ ಕೂಡ ಸಿಕ್ಕಿದೆ.

ಈ ಟಿಪ್ಪಣಿಯಲ್ಲಿ ನಾವು ಏನು ಮಾಡುತ್ತಿದ್ದೇವೆ ಹಾಗೂ ಇದರಿಂದ ಯಾವ ಪರಿಣಾಮ ಉಂಟಾಗಬಹುದು ಎಂಬುದರ ಐಡಿಯಾ ನಮಗಿಲ್ಲ ಎಂದು ಬರೆಯಲಾಗಿತ್ತು.

ನಾವು ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ಹೀಗಾಗಿ ನಮ್ಮನ್ನ ನಾವು ಹುರಿದುಂಬಿಸಿಕೊಳ್ಳುವ ಯತ್ನದಲ್ಲಿದ್ದೇವೆ. ಮಿ. ಬರ್ಡ್​ ಜೊತೆ ನಾವು ಗುಣಮಟ್ಟದ ಸಮಯವನ್ನ ಕಳೆದಿದ್ದೇವೆ. ಅಲ್ಲದೇ ನಮ್ಮ ಈ ಹೊಸ ಗೆಳೆಯನಿಗೆ ಯಾವುದೇ ತೊಂದರೆ ಮಾಡಿಲ್ಲ ಎಂದು ಬರೆಯಲಾಗಿದೆ.

ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಜೂನ್​ 30ರಂದು ಕೋರ್ಟ್​ ಎದುರು ಇಬ್ಬರು ಪುರುಷರು ಹಾಜರಾಗಿದ್ದಾರೆ. ವಿಚಾರಣೆ ಬಳಿಕ ಇಬ್ಬರೂ, ಪತ್ರಕರ್ತರಿಗೆ ಯಾವುದೇ ಹೇಳಿಕೆ ನೀಡೋದನ್ನ ನಿರಾಕರಿಸಿ ಪೊಲೀಸ್​ ವಾಹನ ಏರಿದ್ದಾರೆ. ಮುಂದಿನ ವಿಚಾರಣೆ ನವೆಂಬರ್ ತಿಂಗಳಲ್ಲಿ ನಡೆಯಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...