alex Certify PSI ಹಗರಣದ ಆರೋಪಿಗಳ ಜೊತೆ ಬಿಜೆಪಿ ಸಂಸದ ಉಮೇಶ್ ಜಾಧವ್ ಊಟ: ನಿನ್ನೆ ಆರ್.ಡಿ.ಪಾಟೀಲ್, ಇಂದು ದಿವ್ಯಾ ಹಾಗರಗಿ ಜೊತೆಗಿನ ಫೊಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PSI ಹಗರಣದ ಆರೋಪಿಗಳ ಜೊತೆ ಬಿಜೆಪಿ ಸಂಸದ ಉಮೇಶ್ ಜಾಧವ್ ಊಟ: ನಿನ್ನೆ ಆರ್.ಡಿ.ಪಾಟೀಲ್, ಇಂದು ದಿವ್ಯಾ ಹಾಗರಗಿ ಜೊತೆಗಿನ ಫೊಟೋ ವೈರಲ್

ಕಲಬುರ್ಗಿ: ರಾಜ್ಯಾದ್ಯಂತ ಭಾರಿ ಸುದ್ದಿ ಮಾಡಿದ್ದ ಪಿಎಸ್ ಐ ನೇಮಕಾತಿ ಹಗರಣದ ಪ್ರಮುಖ ಆರೋಪಿಗಳ ಮನೆಗೆ ಭೇಟಿ ನೀಡಿರುವ ಬಿಜೆಪಿ ಸಂಸದ ಉಮೇಶ್ ಜಾಧವ್ ಆರೋಪಿಗಳ ಬೆಂಬಲಿಗರೊಂದಿಗೆ ಕುಳಿತು ಊಟ ಮಾಡಿ ಫೋಟೋಗೆ ಪೋಸ್ ನೀಡಿರುವ ಘಟನೆ ನಡೆದಿದೆ. ಪಿಎಸ್ ಐ ಹಗರಣದಲ್ಲಿ ಬಿಜೆಪಿ ನಾಯಕರೇ ಶಮಿಲಾಗಿದ್ದರು ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಏನು ಬೇಕು ಎಂದು ಕಾಂಗ್ರೆಸ್ ಕಿಡಿಕಾರಿದೆ.

ಕಲಬುರ್ಗಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್, ಪಿಎಸ್ ಐ ಹಗರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ನಿವಾಸಕ್ಕೆ ತೆರಳಿ ಮತಯಾಚಿಸಿದ್ದಾರೆ. ಈ ವೇಳೆ ಅಲ್ಲಿ ಊಟವನ್ನು ಮಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬೆಳವಣಿಗೆ ಬೆನ್ನಲ್ಲೇ ಇಂದು ಪಿಎಸ್ ಐ ಹಗರಣದ ಇನ್ನೋರ್ವ ಪ್ರಮುಖ ಆರೋಪಿಯಾಗಿ ಬಂಧನಕ್ಕೀಡಾಗಿದ್ದ ದಿವ್ಯಾ ಹಾಗರಗಿ ಜೊತೆ ಉಮೇಶ್ ಜಾಧವ್ ಹಾಗೂ ಬಿಜೆಪಿ ಮುಖಂಡರು ಫೋಟೋಗೆ ಪೋಸ್ ನೀಡಿದ್ದಾರೆ. ಬಿಜೆಪಿ ನಾಯಕರ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರಾಮನವಮಿ ಮೆರವಣಿಗೆಯಲ್ಲಿ ತೆಗೆದ ಫೋಟೋಗಳನ್ನು ಉಮೇಶ್ ಜಾಧವ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಾಕಿಕೊಂಡಿದ್ದಾರೆ.

ಸಾವಿರಾರು ಯುವಕರ ಭವಿಷ್ಯಕ್ಕೆ ಕೊಳ್ಳಿಯಿಟ್ಟ ಪಿಎಸ್ ಐ ಹಗರಣದ ಆರೋಪಿಗಳ ಜೊತೆಗೆ ಬಿಜೆಪಿ ಸಂಸದ ಉಮೇಶ್ ಜಾದವ್ ಇರುವುದು ಹಾಗೂ ಫೋಟೋಗೆ ಪೋಸ್ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...