alex Certify ಭಾರತದ ಮಾರುಕಟ್ಟೆಗೆ ಟಿವಿಎಸ್​ ರೋನಿನ್​ ; ಬೆಲೆ ಎಷ್ಟು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಮಾರುಕಟ್ಟೆಗೆ ಟಿವಿಎಸ್​ ರೋನಿನ್​ ; ಬೆಲೆ ಎಷ್ಟು ಗೊತ್ತಾ ?

ಟಿವಿಎಸ್​ ಮೋಟಾರ್​ ಸೈಕಲ್ಸ್​ ಹೊಸ ರೋನಿನ್​ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಎಕ್ಸ್​ ರೂಂ ಬೆಲೆ 1.49 ಲಕ್ಷ ರೂಪಾಯಿಗಳಾಗಿದ್ದು, ಭಾರತದಲ್ಲಿ ಈ ಬೈಕನ್ನು ಮೂರು ವೇರಿಯಂಟ್​ನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಮುನ್ನ ಬೈಕು ಕ್ರೂಸರ್​ ರೀತಿ ಇರಬಹುದೆಂದು ನಿರೀಕ್ಷಿಸಲಾಗಿತ್ತು, ಆದರೆ ಬಿಡುಗಡೆಯ ನಂತರ ಅದು ಸ್ಕ್ರಾಂಬ್ಲರ್​ ಮತ್ತು ಕೆಫೆ ರೇಸರ್​ ವಿನ್ಯಾಸ ಅನುಸರಿಸಿದಂತಿದೆ. ಟಿವಿಎಸ್​ ರೋನಿನ್​ ತಯಾರಕರು ಭಾರತದಲ್ಲಿ ಮೋಟಾರ್​ಸೈಕಲ್​ಗಳ ವಿಭಾಗಕ್ಕೆ ಕಾಲಿಡುತ್ತಿರುವುದು ಇದೇ ಮೊದಲು.

ಇಲ್ಲಿಯವರೆಗೆ ತಯಾರಕರು ಅಪಾಚೆ ಹಂತದ ಸ್ಪೋರ್ಟ್ಸ್​ ಬೈಕ್​ಗಳನ್ನು ಮಾತ್ರ ಮಾರುಕಟ್ಟೆಗೆ ಬಿಡುತ್ತಿದ್ದರು. ಟಿವಿಎಸ್​ ರೋನಿನ್​ ವೇರಿಯಂಟ್​- ವಾರು ಬೆಲೆಯನ್ನು ಇಲ್ಲಿ ಪರಿಶೀಲಿಸುವುದಾದರೆ.
ಟಿವಿಎಸ್​ ರೋನಿನ್​ ಸಿಂಗಲ್​ ಟೋನ್​ ಸಿಂಗಲ್​ ಚಾನೆಲ್​- ರೂ. 1.49 ಲಕ್ಷ (ಎಕ್ಸ್​ ಶೋ ರೂಂ), ಟಿವಿಎಸ್​ ರೋನಿನ್​ ಡ್ಯುಯಲ್​-ಟೋನ್​ ಸಿಂಗಲ್​ ಚಾನೆಲ್​- ರೂ. 1.56 ಲಕ್ಷ (ಎಕ್ಸ್​ ಶೋ ರೂಂ), ಟಿವಿಎಸ್​ ರೋನಿನ್​ ಟ್ರಿಪಲ್​ ಟೋನ್​ ಡ್ಯುಯಲ್​ ಚಾನೆಲ್​ ರೂ. 1.68 ಲಕ್ಷ (ಎಕ್ಸ್​ ಶೋ ರೂಂ).

ಟಿವಿಎಸ್​ ರೋನಿನ್​ ಕೆಫೆ ರೇಸರ್​ ಅನ್ನು ನೆನಪಿಸುವ ಬಹು ಅಂಶಗಳೊಂದಿಗೆ ಸ್ಕಾಂಬ್ಲರ್​ ಆಧಾರಿತ ವಿನ್ಯಾಸ ಪಡೆಯುತ್ತದೆ. ಉದಾಹರಣೆಗೆ, ಬೈಕು ವೃತ್ತಾಕಾರದ ಸಿಗ್ನೇಚರ್​ ಎಲ್​ಇಡಿ ಹೆಡ್​ಲ್ಯಾಂಪ್​ ಹೊಂದಿದೆ. ಇದು ಟಿಯರ್​- ಡ್ರಾಪ್​ – ಆಕಾರದ ಇಂಧನ ಟ್ಯಾಂಕ್​ನೊಂದಿಗೆ ಸೈಡೆ​ಡ್​ ಪ್ಯಾನೆಲ್​ಗಳೊಂದಿಗೆ ಸಿಂಗಲ್​ ಪೀಸ್​ ಸೀಟಿನೊಂದಿಗೆ ಸೇರಿಕೊಳ್ಳುತ್ತದೆ.

ಡ್ಯುಯಲ್​ ಪರ್ಪಸ್​ ಟೈರ್​ಗಳಲ್ಲಿ ಆವರಿಸಿರುವ ಮಲ್ಟಿ ಸ್ಪೋಕ್​ ಅಲಾಯ್​ ವೀಲ್​, ಇಂಟೆಲಿಜೆಂಟ್​ ಎಲೆಕ್ಟ್ರಾನಿಕ್​ ಆಕಿರ್ಟೆಕ್ಚರ್​ನೊಂದಿಗೆ ರೌಂಡ್​ ಡಿಜಿಟಲ್​ ಮೊನೊಪಾಡ್​, ಸ್ಮಾರ್ಟ್​ ಕ್ಸನೆಕ್ಟ್​ ಕನೆಕ್ಟಿವಿಟಿ, ಟರ್ನ್​ ಬೈ‌ ಟರ್ನ್​ ನ್ಯಾವಿಗೇಷನ್​, ಕರೆ ಸ್ವೀಕಾರ, ಧ್ವನಿ ಸಹಾಯಕ ಮತ್ತು ರೈಡ್​ ಮೋಡ್​, ಇಂಟಿಗ್ರೇಟೆಡ್​ ಸ್ಟಾರ್ಟರ್​ ಮತ್ತು ಯುಎಸ್​ಬಿ ಸ್ಮಾರ್ಟ್​ ಚಾರ್ಜರ್​ ಬದಲಾವಣೆಯಂತಹ ಬಹು ವೈಶಿಷ್ಟ್ಯಗಳನ್ನು ಹೊಂದಿವೆ.

TVS Ronin

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...