alex Certify ಪ್ರವಾಸಿಗರಿಗೆ ಸಿಹಿ ಸುದ್ದಿ: ಫೋಟೋ ಅಪ್ಲೋಡ್ ಮಾಡಿ ಉಚಿತ ಪ್ರವಾಸ ಗೆಲ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರಿಗೆ ಸಿಹಿ ಸುದ್ದಿ: ಫೋಟೋ ಅಪ್ಲೋಡ್ ಮಾಡಿ ಉಚಿತ ಪ್ರವಾಸ ಗೆಲ್ಲಿ

ಬೆಂಗಳೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸ ಫೋಟೋ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಅತ್ಯುತ್ತಮ ಫೋಟೋಗಳಿಗೆ ಪ್ರವಾಸಿ ಸ್ಥಳಗಳಲ್ಲಿ ಉಚಿತವಾಗಿ ಉಳಿದುಕೊಳ್ಳುವ ಬಹುಮಾನ ಇರುತ್ತದೆ.

ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ರಾಜ್ಯದ ಯಾವುದೇ ಪ್ರವಾಸಿ ತಾಣಕ್ಕೆ ತೆರಳಿ ಫೋಟೋ ತೆಗೆಸಿಕೊಂಡು ಸೆ. 25ರೊಳಗೆ ತಾವು ತೆಗೆದ ಉತ್ತಮ ಫೋಟೋಗಳನ್ನು WTDkarnatakaCompetion ಹ್ಯಾಷ್ ಟ್ಯಾಗ್ ಬಳಸಿ ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕು. ಇದರೊಂದಿಗೆ @karnatakaworld ಖಾತೆ ಫಾಲೋ ಮಾಡಿ ಟ್ಯಾಗ್ ಮಾಡಬೇಕು.

ಹೆಚ್ಚು ಲೈಕ್ಸ್ ಮತ್ತು ಕಮೆಂಟ್ಸ್ ಪಡೆದ ಮೊದಲ ಮೂರು ಫೋಟೋಗಳನ್ನು ಪರಿಗಣಿಸಿ ವಿಜೇತರನ್ನು ಘೋಷಿಸಲಾಗುವುದು. ವಿಜೇತರಿಗೆ KSTDC ಮತ್ತು ಇತರೆ ಖಾಸಗಿ ಹೋಟೆಲ್ ಗಳಲ್ಲಿ ಒಂದು ದಿನ, ಎರಡು ರಾತ್ರಿ ಉಚಿತವಾಗಿ ವಾಸ್ತವ್ಯ ಕಲ್ಪಿಸಲಾಗುವುದು. ಸೆಪ್ಟೆಂಬರ್ 25ರೊಳಗೆ ಫೋಟೋ ಅಪ್ಲೋಡ್ ಮಾಡಲು ಅವಕಾಶವಿದೆ. ಅಂದು ಸಂಜೆ 6 ಗಂಟೆಗೆ ವಿಜೇತರನ್ನು ಘೋಷಣೆ ಮಾಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...