alex Certify ಎರಡು ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ ಟಾರ್ಕ್ ಮೋಟಾರ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ ಟಾರ್ಕ್ ಮೋಟಾರ್ಸ್..!

73 ನೇ ಗಣರಾಜ್ಯ ದಿನದಂದು ಟಾರ್ಕ್ ಮೋಟಾರ್ಸ್ ಭಾರತದಲ್ಲಿ ತನ್ನ ಹೊಸ ಕ್ರೆಟೋಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಬೈಕ್ ಸೆಪ್ಟೆಂಬರ್ 2016 ರಲ್ಲಿ ಪ್ರದರ್ಶಿಸಲಾದ T6X ಪರಿಕಲ್ಪನೆಯ ಮಾದರಿಯನ್ನು ಆಧರಿಸಿದೆ. 180 ಕಿಮೀ ಶ್ರೇಣಿ, 105 kmph ಗರಿಷ್ಠ ವೇಗ, 4 ಸೆಕೆಂಡುಗಳಲ್ಲಿ 0-40 kmph ವೇಗವರ್ಧನೆ ಇದರ ಪ್ರಮುಖ ವೈಶಿಷ್ಟ್ಯಗಳು ಎಂದು ಕಂಪನಿ ಹೇಳಿದೆ‌

ಕ್ರೆಟೋಸ್ ಅನ್ನು ಭಾರತದಲ್ಲಿ ಎರಡು ಡಿಸೈನ್ನಲ್ಲಿ ಬಿಡುಗಡೆ ಮಾಡಲಾಗಿದೆ.‌ Kratos ಮತ್ತು Kratos R ರೂ 1.02 ಲಕ್ಷದಿಂದ (ಎಕ್ಸ್-ಶೋರೂಂ, ದೆಹಲಿ/ಸಬ್ಸಿಡಿ ಸೇರಿದಂತೆ) ಪ್ರಾರಂಭವಾಗುತ್ತದೆ. ಇನ್ನೂ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಕೇವಲ 999 ರೂ. ಡೌನ್ ಪೇಮೆಂಟ್ ಮಾಡುವ ಬುಕಿಂಗ್ ತೆರೆದಿದೆ. ಈ ವಾಹನವನ್ನು ಭಾರತದಲ್ಲಿ ಹಂತಹಂತವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಸ್ಟ್ಯಾಂಡರ್ಡ್ ಮಾಡೆಲ್ ಅನ್ನು ಬಿಳಿ ಬಣ್ಣದ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ, ಆದರೆ ಹೈ-ಸ್ಪೆಕ್ “R” ಮಾದರಿಯನ್ನು ಬಿಳಿ, ನೀಲಿ, ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ. ಸದ್ಯ ಪುಣೆ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ದೆಹಲಿ ಸೇರಿದಂತೆ ಪ್ರಮುಖ ಭಾರತೀಯ ನಗರಗಳಲ್ಲಿ ಮಾತ್ರ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಲಭ್ಯವಿದೆ.

ಟಾರ್ಕ್ ಕ್ರೆಟೋಸ್ 180 km ನ IDC ಶ್ರೇಣಿಯೊಂದಿಗೆ ಬರುತ್ತದೆ. ನೈಜವಾಗಿ 120 km ಶ್ರೇಣಿ ಪಡೆದಿದೆ ಎಂದು ಕಂಪನಿ ಕ್ಲೈಮ್ ಮಾಡಿದೆ. ಈ ಎಲೆಕ್ಟ್ರಿಕ್ ಮೋಟಾರ್ ‌ಸೈಕಲ್ IP67-ರೇಟೆಡ್ 4 Kwh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌, 48V ಸಿಸ್ಟಮ್ ವೋಲ್ಟೇಜ್‌ ನೊಂದಿಗೆ ಬರುತ್ತದೆ. ಸ್ಟ್ಯಾಂಡರ್ಡ್ ರೂಪಾಂತರದ ವೇಗ 100 kmph ಇದ್ದರೆ “R” ರೂಪಾಂತರದ ವೇಗ 105 kmph ನಷ್ಟಿದೆ.

ಬೇಸ್ ರೂಪಾಂತರವು 7.5 Kw ಗರಿಷ್ಠ ಶಕ್ತಿ ಮತ್ತು 28 Nm ನ ಗರಿಷ್ಠ ಟಾರ್ಕ್ ಉತ್ಪಾದನೆಯೊಂದಿಗೆ ಬರುತ್ತದೆ. ಹೈ-ಸ್ಪೆಕ್ Kratos R ಗರಿಷ್ಠ 9.0 Kw ಮತ್ತು 38nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರಮಾಣಿತ ರೂಪಾಂತರವು ವೇಗದ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ ಬರುವುದಿಲ್ಲ, ಆದರೆ “R” ರೂಪಾಂತರದಲ್ಲಿ ಈ ವೈಶಿಷ್ಟ್ಯವಿದೆ. ಜಿಯೋಫೆನ್ಸಿಂಗ್, ಫೈಂಡ್ ಮೈ ವೆಹಿಕಲ್ ಫೀಚರ್, ಮೋಟರ್‌ವಾಕ್ ಅಸಿಸ್ಟ್, ಕ್ರ್ಯಾಶ್ ಅಲರ್ಟ್, ವೆಕೇಶನ್ ಮೋಡ್, ಟ್ರ್ಯಾಕ್ ಮೋಡ್ ಅನಾಲಿಸಿಸ್ ಮತ್ತು ಸ್ಮಾರ್ಟ್ ಚಾರ್ಜ್ ಅನಾಲಿಸಿಸ್ ನಂತಹ ಫೀಚರ್ ಗಳು ಎರಡು ರೂಪಾಂತರದಲ್ಲಿವೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...