alex Certify ಬೇಸಿಗೆಯಲ್ಲಿ ಬಿಡದೇ ಕಾಡುತ್ತದೆ ಟಾನ್ಸಿಲ್‌ ಸಮಸ್ಯೆ, ರೋಗದ ಆರಂಭಿಕ ಲಕ್ಷಣಗಳಿವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಬಿಡದೇ ಕಾಡುತ್ತದೆ ಟಾನ್ಸಿಲ್‌ ಸಮಸ್ಯೆ, ರೋಗದ ಆರಂಭಿಕ ಲಕ್ಷಣಗಳಿವು

 

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಬಾರಿ ಟಾನ್ಸಿಲ್‌ ಸಮಸ್ಯೆ ಉಂಟಾಗುತ್ತದೆ. ಇದನ್ನು ಗಲಗ್ರಂಥಿಯ ಉರಿಯೂತ ಎಂದು ಕರೆಯುತ್ತೇವೆ. ಇದು ಕಿವಿ, ಮೂಗು ಮತ್ತು ಗಂಟಲಿನ ಸಮಸ್ಯೆಯಾಗಿದೆ. ಗಂಟಲಿನ ಒಳಭಾಗದಲ್ಲಿ ಮೊಟ್ಟೆಯ ಆಕಾರದ ಪ್ಯಾಡ್ ರಚನೆಯಾಗುತ್ತದೆ, ಇದರಿಂದಾಗಿ ಊತ ಉಂಟಾಗುತ್ತದೆ.

ವಾಸ್ತವವಾಗಿ ಟಾನ್ಸಿಲ್‌ಗಳು ರಕ್ಷಕನಂತೆ ಕಾರ್ಯನಿರ್ವಹಿಸುತ್ತವೆ,  ಯಾವುದೇ ಸೋಂಕು ದೇಹಕ್ಕೆ ಪ್ರವೇಶಿಸದಂತೆ ತಡೆಯುತ್ತವೆ. ಆದರೆ ಟಾನ್ಸಿಲ್‌ಗಳ ಮೇಲೆಯೇ ಸೋಂಕು ಕಾಣಿಸಿಕೊಂಡಾಗ ಅದನ್ನು ಗಲಗ್ರಂಥಿಯ ಉರಿಯೂತ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ  ಮಕ್ಕಳಲ್ಲಿ ಬಹಳ ಅಧಿಕ. ವೈರಸ್‌ ಅಥವಾ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ತೊಂದರೆ ಇದು.

ಟಾನ್ಸಿಲ್‌ಗಳನ್ನು ಸೋಂಕಿನಿಂದ ದೇಹವನ್ನು ರಕ್ಷಿಸುವ ಮೊದಲ ಹಂತವೆಂದು ಪರಿಗಣಿಸಲಾಗುತ್ತದೆ. ಅವು ಬಿಳಿ ರಕ್ತ ಕಣಗಳನ್ನು (WBC) ಉತ್ಪಾದಿಸುತ್ತವೆ, ಇದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮೂಗು ಮತ್ತು ಬಾಯಿಯ ಮೂಲಕ ದೇಹವನ್ನು ಪ್ರವೇಶಿಸುವ ವೈರಸ್‌, ಬ್ಯಾಕ್ಟೀರಿಯಾಗಳೊಂದಿಗೆ ಮಾತ್ರ ಟಾನ್ಸಿಲ್‌ ಹೋರಾಡುತ್ತದೆ. ಆದರೆ ಟಾನ್ಸಿಲ್ಗಳು ಬಹಳ ಸೂಕ್ಷ್ಮವಾಗಿರುವುದರಿಂದ ಬಹಳ ಬೇಗ ಸ್ಟ್ರೆಪ್ಟೋಕೊಕಲ್ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಅವುಗಳಿಗೆ ಸೋಂಕು ತಗುಲಿಸಬಹುದು ಮತ್ತು ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಸಾಮಾನ್ಯ ಶೀತ ಮತ್ತು ಗಂಟಲು ನೋವಿನಿಂದಲೂ ಈ ಸಮಸ್ಯೆ ಬರಬಹುದು.

ರೋಗಲಕ್ಷಣಗಳು ಕಾಣಿಸಿಕೊಂಡಾಗ ಸಮಯವನ್ನು ವ್ಯರ್ಥ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಗಲಗ್ರಂಥಿಯ ಉರಿಯೂತದ ಪ್ರಮುಖ ಲಕ್ಷಣಗಳೆಂದರೆ ಟಾನ್ಸಿಲ್‌ಗಳಲ್ಲಿ ಊತ. ಇದರ ಹೊರತಾಗಿ ಗಂಟಲು ನೋವು,  ಕೆಂಪು ಟಾನ್ಸಿಲ್ಸ್‌, ಜ್ವರ, ಟಾನ್ಸಿಲ್‌ಗಳ ಮೇಲೆ ಹಳದಿ ಅಥವಾ ಬಿಳಿ ಲೇಪನ, ತಲೆನೋವು, ಬಾಯಿ ಹುಣ್ಣು, ಕಿವಿ ನೋವು, ಹಸಿವಿನ ನಷ್ಟ, ಧ್ವನಿ ಬದಲಾಗುವುದು, ಕೆಟ್ಟ ಉಸಿರಾಟ, ಶೀತ, ಆಹಾರ ನುಂಗಲು ತೊಂದರೆ ಇವೆಲ್ಲವೂ ಅದರ ಲಕ್ಷಣಗಳು. ಮಕ್ಕಳಲ್ಲಿ ಕಂಡುಬರುವ ಇತರ ಲಕ್ಷಣಗಳೆಂದರೆ ವಾಂತಿ, ಜೊಲ್ಲು ಸುರಿಸುವುದು, ಹೊಟ್ಟೆ ಕೆಡುವುದು, ಹೊಟ್ಟೆ ನೋವು. ತಕ್ಷಣವೇ ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ ಸಮಸ್ಯೆ ಉಲ್ಬಣಿಸುತ್ತದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...