alex Certify ‘ಟೀಮ್ ಇಂಡಿಯಾ’ ಶರ್ಟ್ ಬೇಡವೆಂದಿದ್ದರಂತೆ ಪಾಕಿಸ್ತಾನದ ಬೌಲರ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಟೀಮ್ ಇಂಡಿಯಾ’ ಶರ್ಟ್ ಬೇಡವೆಂದಿದ್ದರಂತೆ ಪಾಕಿಸ್ತಾನದ ಬೌಲರ್….!

ಪಾಕಿಸ್ತಾನದ ಬೌಲರ್ ಹ್ಯಾರಿಸ್ ರೌಫ್ ತಾವು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಿ.ಎಸ್.ಕೆ ಟೀ-ಶರ್ಟ್ ಪಡೆದುಕೊಂಡಿದ್ದರ ಹಿಂದಿನ ಘಟನೆಗಳನ್ನು ಕುರಿತು ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿಯಾಗಿದ್ದ ಹ್ಯಾರಿಸ್ ರೌಫ್, ನೆನಪಿಗಾಗಿ ನಿಮ್ಮ ಒಂದು ಶರ್ಟ್ ನನಗೆ ಬೇಕು ಎಂದು ಕೇಳಿದ್ದರಂತೆ. ಆದರೆ ಟೀಮ್ ಇಂಡಿಯಾ ಶರ್ಟ್ ಬೇಡ, ನನಗೆ ಸಿ.ಎಸ್.ಕೆ. ಜರ್ಸಿ ನೀಡಿ ಎಂಬ ಬೇಡಿಕೆಯನ್ನಿಟ್ಟಿದ್ದಾರೆ.

ಇದಕ್ಕೆ ಸ್ಪಂದಿಸಿದ ಮಹೇಂದ್ರ ಸಿಂಗ್ ಧೋನಿ ಅವರಿಗೆ ತಮ್ಮ ಸಿ.ಎಸ್.ಕೆ. ಟಿ-ಶರ್ಟ್ ಕಳುಹಿಸಿಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ತಾವು ನೆಟ್ ಬೌಲರ್ ಆಗಿ ಕಾರ್ಯ ನಿರ್ವಹಿಸಿದ್ದನ್ನು ಸಹ ಹ್ಯಾರಿಸ್ ರೌಫ್ ನೆನಪಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...