alex Certify ಟೋಕಿಯೋ ಒಲಿಂಪಿಕ್ಸ್: ಜಪಾನ್​ ತರಬೇತಿ ಕೇಂದ್ರದಲ್ಲಿದ್ದ ಉಗಾಂಡಾದ ಕ್ರೀಡಾಪಟು ಕಣ್ಮರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್ಸ್: ಜಪಾನ್​ ತರಬೇತಿ ಕೇಂದ್ರದಲ್ಲಿದ್ದ ಉಗಾಂಡಾದ ಕ್ರೀಡಾಪಟು ಕಣ್ಮರೆ

ಟೋಕಿಯೋ ಒಲಿಂಪಿಕ್​ಗೆ ಕೊರೊನಾ ಸಂಕಷ್ಟ ಎದುರಾಗಿರುವ ನಡುವೆಯೇ ಜಪಾನ್​ನಲ್ಲಿ ಶುಕ್ರವಾರ ನಾಪತ್ತೆಯಾಗಿರುವ ಉಗಾಂಡಾದ ಕ್ರೀಡಾಪಟುಗಾಗಿ ಹುಡುಕಾಟ ಜೋರಾಗಿದೆ.

ನಾಪತ್ತೆಯಾಗಿರುವ 20 ವರ್ಷದ ಜ್ಯೂಲಿಯಸ್​ ಸೆಕಿಟೋಲೆಕೊ ಒಸಾಕೊ ಪ್ರಾಂತ್ಯದ ಇಜುಮಿಸಾನೊದಲ್ಲಿ 9 ಸದಸ್ಯರನ್ನ ಹೊಂದಿರುವ ಉಗಾಂಡ ತಂಡದ ಸದಸ್ಯನಾಗಿ ತರಬೇತಿ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜ್ಯೂಲಿಯಸ್​ ನಾಪತ್ತೆಯಾಗಿದ್ದಾನೆ ಎಂಬ ವಿಚಾರ ಶುಕ್ರವಾರ ಸಂಜೆ ಸುಮಾರಿಗೆ ಸಹ ಕ್ರೀಡಾಪಟುಗಳ ಗಮನಕ್ಕೆ ಬಂದಿದೆ. ಕ್ರೀಡಾಪಟುಗಳಿಗೆ ಲಾಲಾರಸ ಪರೀಕ್ಷೆ ನಡೆಸುತ್ತಿದ್ದ ವೇಳೆಯಲ್ಲಿ ಜ್ಯೂಲಿಯಸ್​ ಗೈರಾಗಿದ್ದರು. ಈ ವೇಳೆ ಅವರ ಹೋಟೆಲ್​ ರೂಮ್​ ಪರಿಶೀಲನೆ ಮಾಡಿದಾಗ ಅಲ್ಲೂ ಸಹ ಅವರು ಕಂಡುಬಂದಿಲ್ಲ. ಜ್ಯೂಲಿಯಸ್​ ಶುಕ್ರವಾರ ಬೆಳಗ್ಗೆ ಕೊನೆಯ ಬಾರಿಗೆ ಎಲ್ಲರೆದುರು ಕಾಣಿಸಿಕೊಂಡಿದ್ದರು.

ಹೋಟೆಲ್​ನಲ್ಲಿ ಜ್ಯೂಲಿಯಸ್ ಕಾಣದಿರುವ ಹಿನ್ನೆಲೆಯಲ್ಲಿ ಒಲಿಂಪಿಕ್​ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...