alex Certify ಟೋಕಿಯೋ ಒಲಿಂಪಿಕ್ಸ್ 2020: ದಶಕಗಳ ಬಳಿಕ ಹಾಕಿ ತಂಡದಿಂದ ಕರ್ನಾಟಕ ಸ್ಥಾನ ವಂಚಿತ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್ಸ್ 2020: ದಶಕಗಳ ಬಳಿಕ ಹಾಕಿ ತಂಡದಿಂದ ಕರ್ನಾಟಕ ಸ್ಥಾನ ವಂಚಿತ…..!

ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಆಗಿದ್ದರೂ ಸಹ ಹಾಕಿಯ ತವರೂರು ಅಂದ ಕೂಡಲೇ ನೆನಪಾಗೋದೇ ನಮ್ಮ ರಾಜ್ಯದ ಕೊಡಗು. ಈ ಬಾರಿಯ ಟೋಕಿಯೋ ಒಲಿಂಪಿಕ್​ನಲ್ಲೂ ಸಹ ಚಿನ್ನದ ಪದಕವನ್ನ ಬಾಚಲು ಭಾರತದ ಆಟಗಾರರು ರೆಡಿಯಾಗಿದ್ದಾರೆ. ಆದರೆ ಈ ಬಾರಿಯ ಒಲಿಂಪಿಕ್​ ಹಾಕಿ ತಂಡದಲ್ಲಿ ಯಾವೊಬ್ಬ ಕನ್ನಡಿಗನಿಗೂ ಸ್ಥಾನ ನೀಡದೇ ಇರೋದು ರಾಜ್ಯದ ಜನತೆಗೆ ನೋವುಂಟು ಮಾಡಿದೆ.

ಈವರೆಗೆ ಕೊಡಗಿನಿಂದ 13 ಆಟಗಾರರು ಒಲಿಂಪಿಕ್ಸ್​​ನ ಹಾಕಿ ಪಂದ್ಯಾವಳಿಯಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ. ಕಳೆದ ಬಾರಿ ಅಂದರೆ 2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್​ನಲ್ಲೂ ಸಹ ಭಾರತದ ಹಾಕಿ ತಂಡದಲ್ಲಿ ಕನ್ನಡಿಗರಾದ ನಿಕ್ಕಿನ್​ ತಿಮ್ಮಯ್ಯ, ವಿ.ಆರ್.​ ರಘುನಾಥ್​, ಎಸ್​ವಿ ಸುನೀಲ್​ ಹಾಗೂ ಎಸ್​ಕೆ ಉತ್ತಪ್ಪ ಸ್ಥಾನ ಪಡೆದಿದ್ದರು. ದಶಕಗಳಿಂದ ಕನ್ನಡಿಗರಿಗೆ ಹಾಕಿ ತಂಡದಲ್ಲಿ ಸಿಗುತ್ತಿದ್ದ ಸ್ಥಾನ ಈ ಬಾರಿ ಮಿಸ್​ ಆಗಿರೋದು ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ ಕೊಡವರ ಬೇಸರಕ್ಕೆ ಕಾರಣವಾಗಿದೆ.

1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್​​ನಲ್ಲಿ ಭಾರತದ ಹಾಕಿ ತಂಡ ಚಿನ್ನದ ಪದಕವನ್ನ ಸಂಪಾದಿಸಿತ್ತು. ಈ ತಂಡದಲ್ಲಿದ್ದ ಎಂ.ಎಂ. ಸೋಮಯ್ಯ ಕೊಡಗಿನವರಾಗಿದ್ದರು. ಅಷ್ಟೇ ಏಕೆ 1972ರಲ್ಲಿ ಮ್ಯೂನಿಕ್​ ಒಲಿಂಪಿಕ್ಸ್​ನಲ್ಲಿ ಭಾರತದ ಹಾಕಿ ತಂಡ ಕಂಚಿನ ಪದಕ ಗಳಿಸುವಲ್ಲಿ ಬಿ.ಪಿ. ಗೋವಿಂದ ಹಾಗೂ ಎಂ.ಪಿ. ಗಣೇಶ್​ ಪ್ರಮುಖ ಪಾತ್ರ ವಹಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...