ಟೋಕಿಯೋ ಒಲಿಂಪಿಕ್ನಲ್ಲಿ ಚಕ್ರ ಎಸೆತ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ. ಕಮಲ್ಪ್ರೀತ್ ತಮ್ಮ ಮೂರನೇ ಪ್ರಯತ್ನದಲ್ಲಿ ಮೀಟರ್ ದೂರಕ್ಕೆ ಚಕ್ರ ಎಸೆತ ಮಾಡುವ ಮೂಲಕ ಫೈನಲ್ನಲ್ಲಿ ಜಾಗ ಸಂಪಾದಿಸಿದ್ದಾರೆ. ಕಮಲ್ಜೀತ್ ಫೈನಲ್ನಲ್ಲೂ ಇದೇ ಪ್ರದರ್ಶನ ನೀಡಿದ್ದಲ್ಲಿ ಅಥ್ಲೆಟಿಕ್ ವಿಭಾಗದಲ್ಲಿ ಪದಕ ಪಡೆದ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. ಕಮಲ್ಪ್ರೀತ್ ಕೌರ್ ಫೈನಲ್ಗೆ ಆಯ್ಕೆಯಾದ ಬಳಿಕ ಭಾರತೀಯರಲ್ಲಿ ಮತ್ತೊಂದು ಪದಕದ ಭರವಸೆ ಹುಟ್ಟುಕೊಂಡಿದೆ.
ಯಾರು ಈ ಕಮಲ್ಪ್ರೀತ್ ಕೌರ್..?
ಕಮಲ್ಪ್ರೀತ್ ಕೌರ್ ಪಂಜಾಬ್ನ ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಬಾದಲ್ ಗ್ರಾಮದ ನಿವಾಸಿಯಾಗಿದ್ದಾರೆ. ವ್ಯಾಸಂಗದಲ್ಲಿ ಹಿಂದಿದ್ದ ಕಮಲ್ ಪ್ರೀತ್ ಕ್ರೀಡೆಯಲ್ಲಿ ಉತ್ತಮ ಆಸಕ್ತಿ ಹೊಂದಿದ್ದರು. ಒಂದು ದಿನ ಕಮಲ್ಪ್ರೀತ್ರ ಕೋಚ್ ಅವರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾಗುವಂತೆ ಹೇಳಿದ್ದರು. ಈ ಸ್ಪರ್ಧೆಯಲ್ಲಿ ಕಮಲ್ಪ್ರೀತ್ ಉತ್ತಮ ಪ್ರದರ್ಶನ ನೀಡುವ ಮೂಲಕ ನಾಲ್ಕನೇ ಸ್ಥಾನವನ್ನು ಸಂಪಾದಿಸಿದ್ದರು. ಓದಿನಲ್ಲಿ ತನಗೆ ಯಾವುದೇ ಸಾಧನೆ ಮಾಡೋದು ಸಾಧ್ಯವಿಲ್ಲ ಎಂಬುದು ಕಮಲ್ಪ್ರೀತ್ಗೆ ಅರಿವಿದ್ದ ಹಿನ್ನೆಲೆ ಅವರು ಕ್ರೀಡೆಯ ಕಡೆಗೆ ಹೆಚ್ಚಿನ ಗಮನ ನೀಡಲು ಶುರು ಮಾಡಿದ್ದರು. ಇದಾದ ಬಳಿಕ ಅವರು ಮೈದಾನಕ್ಕೆ ಇಳಿದು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಮುಂದಾದರು.
2014ರಿಂದ ಕಮಲ್ಪ್ರೀತ್ ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡರು. ಇವರ ಪ್ರಾಥಮಿಕ ತರಬೇತಿ ಅವರ ಗ್ರಾಮದಲ್ಲೇ ಇರುವ ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ನಡೆಯಿತು. ಕಮಲ್ಪ್ರೀತ್ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಚಕ್ರ ಎಸೆತದ ಪ್ರ್ಯಾಕ್ಟಿಸ್ ಮಾಡಲು ಆರಂಭಿಸಿದ್ರು. 2016ರಲ್ಲಿ ಅಂಡರ್ 18 ಹಾಗೂ ಅಂಡರ್ 20 ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಕಮಲ್ ಪ್ರೀತ್ ಹೆಸರಲ್ಲಿದೆ ಈ ದಾಖಲೆ :
2019ರಲ್ಲಿ ದೋಹಾದಲ್ಲಿ ನಡೆದ ಏಷಿಯನ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಕಮಲ್ಪ್ರೀತ್ 5ನೇ ಸ್ಥಾನವನ್ನು ಪಡೆದಿದ್ದರು. ಇವರು 65 ಮೀಟರ್ ದೂರದಲ್ಲಿ ಚಕ್ರ ಎಸೆತ ಮಾಡಿದ್ದರು ಹಾಗೂ ಇಷ್ಟು ದೂರ ಚಕ್ರ ಎಸೆದ ಮೊದಲ ಮಹಿಳೆ ಎನಿಸಿಕೊಂಡರು. 2019ರಲ್ಲಿ 60.5 ಮೀಟರ್ ಚಕ್ರ ಎಸೆತದಲ್ಲಿ ಚಿನ್ನದ ಪದಕ ಸಂಪಾದಿಸಿದ್ದರು.