alex Certify ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ‘ಅಗ್ನಿವೀರ್’ ವಾಯು ಹುದ್ದೆ ನೋಂದಣಿಗೆ ಇಂದು ಕೊನೆಯ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ‘ಅಗ್ನಿವೀರ್’ ವಾಯು ಹುದ್ದೆ ನೋಂದಣಿಗೆ ಇಂದು ಕೊನೆಯ ದಿನ

ಕಲಬುರಗಿ : ಭಾರತೀಯ ವಾಯು ಸೇನೆಯಲ್ಲಿ ಅಗ್ನಿಪಥ ಯೋಜನೆಯಡಿ ಕೆಳಕಂಡ ಅಗ್ನಿವೀರ ವಾಯು ಹುದ್ದೆಗಳಿಗೆ ನೋಂದಾಯಿಸಲು 2023ರ ಜುಲೈ 27 ರಿಂದ ಆಗಸ್ಟ್ 17 ರವರೆಗೆ ಜಿಲ್ಲೆಯ ಹಾಗೂ ರಾಜ್ಯದ 17 ರಿಂದ 21 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಆದ್ದರಿಂದ ಆಗಸ್ಟ್ 17 ನಾಳೆಯೊಳಗಾಗಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಅಗ್ನಿ ವೀರ ವಾಯು ಹುದ್ದೆಗೆ ಅಭ್ಯರ್ಥಿಗಳು ಪಿ.ಯು.ಸಿ ವಿದ್ಯಾರ್ಹತೆ ಹೊಂದಿರಬೇಕು. ಪಿ.ಯು.ಸಿ.ಯಲ್ಲಿ ಪ್ರತಿಶತ 50 ರಷ್ಟು ಅಂಕ ಪಡೆದಿರಬೇಕು ಹಾಗೂ ಆಂಗ್ಲ ಭಾಷೆಯಲ್ಲಿ ಪ್ರತಿಶತ 50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅಗ್ನಿ ವೀರ ವಾಯು ಹುದ್ದೆಗೆ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಡಿಪ್ಲೋಮಾದಲ್ಲಿ ಪ್ರತಿಶತ 50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು https://agnipathvayu.cdac.in ವೆಬ್ಸೈಟ್ದಲ್ಲಿ 2023ರ ಆಗಸ್ಟ್ 17 ರೊಳಗಾಗಿ ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ https://agnipathvayu.cdac.in ವೆಬ್ಸೈಟ್ನ್ನು, ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ದೂರವಾಣಿ: 08472-274846ಗೆ ಸಂಪರ್ಕಿಸಲು ಕೋರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...