alex Certify ಮತ್ತೊಮ್ಮೆ ಜೈಲಿಗೋಗುವುದನ್ನು ತಪ್ಪಿಸಿಕೊಳ್ಳಲು ಖತರ್ನಾಕ್‌ ಪ್ಲಾನ್‌ ಮಾಡಿದ ಆರೋಪಿ ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ಜೈಲಿಗೋಗುವುದನ್ನು ತಪ್ಪಿಸಿಕೊಳ್ಳಲು ಖತರ್ನಾಕ್‌ ಪ್ಲಾನ್‌ ಮಾಡಿದ ಆರೋಪಿ ಅಂದರ್

ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ಜೈಲಿನಲ್ಲಿರುವ 36 ವರ್ಷದ ವ್ಯಕ್ತಿಯೊಬ್ಬ ಪೆರೋಲ್‌ ಮೇಲೆ ಆಚೆ ಬಂದ ಬಳಿಕ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲೆಂದು ಗಾರೆ ಕೆಲಸದಾತರೊಬ್ಬರನ್ನು ಕೊಂದು, ತನ್ನದೇ ಮುಖವನ್ನು ಸುಟ್ಟುಕೊಂಡಿದ್ದಾನೆ.

ದೆಹಲಿಯ ಕಾರಾವಾಲ್ ನಗರದ ಈ ವ್ಯಕ್ತಿಯನ್ನು ಗಾರೆ ಕೆಲಸದಾತನನ್ನು ಕೊಂದ ಆಪಾದನೆ ಮೇಲೆ ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಆಪಾದನೆ ಮೇಲೆ ಆತನ ಪತ್ನಿಯನ್ನೂ ಸಹ ಬಂಧಿಸಲಾಗಿದೆ.

ಆಪಾದಿತ ದಂಪತಿಯನ್ನು ಸುಧೇಶ್‌ ಕುಮಾರ್‌ ಹಾಗೂ ಆತನ ಪತ್ನಿ ಅನುಪಮಾ ಎಂದು ಗುರುತಿಸಲಾಗಿದೆ. ಮಾರ್ಚ್ 2018ರಲ್ಲಿ ತನ್ನ ಮಗಳನ್ನೇ ಕೊಂದ ಆರೋಪದ ಮೇಲೆ ಕುಮಾರ್‌ ಜೈಲಿನಲ್ಲಿದ್ದ. ಕೋವಿಡ್ ಸಾಂಕ್ರಮಿಕದ ಕಾರಣ ಆತನನ್ನು ನಿಯಮವೊಂದರ ಅಡಿ ಪೆರೋಲ್ ಮೇಲೆ ಬಿಟ್ಟು ಕಳುಹಿಸಲಾಗಿತ್ತು.

ಪೊಲೀಸರ ಪ್ರಕಾರ, ಮಗಳನ್ನು ಕೊಂದು ಅಜ್ಞಾತ ಸ್ಥಳವೊಂದರಲ್ಲಿ ಆಕೆಯ ದೇಹ ಎಸೆದಿದ್ದ ಕುಮಾರ್‌, ಆಕೆಯನ್ನು ಅಪಹರಿಸಲಾಗಿದೆ ಎಂದು ಪೊಲೀಸರ ಬಳಿಯೇ ದೂರು ಕೊಟ್ಟಿದ್ದ. ಆದರೆ ಆತನ ದೂರಿನಲ್ಲಿ ಸಾಕಷ್ಟು ಅನುಮಾನಗಳು ಕಂಡು ಬಂದ ಬಳಿಕ ಪೊಲೀಸರು ಕುಮಾರನನ್ನೇ ಬಂಧಿಸಿ ಜೈಲಿಗಟ್ಟಿದ್ದರು.

ಪರಿಶಿಷ್ಟ ಜಾತಿ, ಪಂಗಡದವರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ರಾಷ್ಟ್ರೀಯ ಸಹಾಯವಾಣಿ ಆರಂಭ

ಪೆರೋಲ್ ಮೇಲೆ ಆಚೆ ಬಂದಿದ್ದ ಕುಮಾರ, ಜೈಲಿಗೆ ಮತ್ತೆ ಹೋಗುವುದನ್ನ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಇದಕ್ಕಾಗಿ ಗಾರೆ ಕೆಲಸದವ ಹಾಗೂ ರಿಪೇರಿ ಕೆಲಸವರೊಬ್ಬರನ್ನು ತನ್ನ ಮನೆಗೆ ಕೆಲಸಕ್ಕೆಂದು ಕರೆಯಿಸಿಕೊಂಡ ಕುಮಾರ್‌, ಇಬ್ಬರಲ್ಲಿ ಒಬ್ಬರು ತನ್ನಷ್ಟೇ ಎತ್ತರವಿದ್ದ ಹಾಗೂ ದಪ್ಪವಿದ್ದ ಕಾರಣ ಸಂತ್ರಸ್ತನನ್ನಾಗಿ ಆರಿಸಿಕೊಂಡಿದ್ದಾನೆ.

ಮೇಸ್ತ್ರಿ ದೋಮೆನ್ ರವಿದಾಸ್‌ರನ್ನು ನವೆಂಬರ್‌ 19ರಂದು ತನ್ನ ಮನೆಗೆ ಕರೆಯಿಸಿದ ಕುಮಾರ್‌, ಮಧ್ಯಾಹ್ನ ಮೂರು ಗಂಟೆ ವೇಳೆ ಹೆಂಡ ಕುಡಿಯಲು ಆತನಿಗೆ ಪ್ರೇರೇಪಿಸಿದ್ದಾನೆ. ಮೇಸ್ತ್ರಿಗೆ ಪ್ರಜ್ಞೆ ತಪ್ಪುವಂತೆ ಕುಡಿಸಿದ ಕುಮಾರ್‌, ಆತನ ತಲೆಗೆ ಮಂಚದ ಕಾಲಿನಿಂದ ಜೋರಾಗಿ ಹೊಡೆದಿದ್ದಾನೆ. ಆತನ ಮುಖವನ್ನು ಸುಟ್ಟಹಾಕಿದ ಕುಮಾರ್‌, ತನ್ನ ಆಧಾರ್‌ ಕಾರ್ಡ್‌ಅನ್ನು ಸಂತ್ರಸ್ತನ ಜೇಬಿನಲ್ಲಿ ಇಟ್ಟಿದ್ದಾನೆ.

ಹೆಲಿಕಾಪ್ಟರ್‌ ದುರಂತದ ಅಂತಿಮ ಕ್ಷಣಗಳ ಸೆರೆಹಿಡಿದ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ

“ನನ್ನ ಮಡದಿ ಅನುಪಮ ಕೊಲೆಯ ಬಗ್ಗೆ ತಿಳಿದಾಗ, ಆಕೆಗೆ ಆ ದೇಹ ನನ್ನದೆಂದು ಗುರುತಿಸಲು ಹೇಳಿ, ನನ್ನ ಯೋಜನೆಯನ್ನು ವಿವರಿಸಿದೆ. ಮೇಸ್ತ್ರಿಯನ್ನು ಕೊಂದ ಬಳಿಕ ಆತನ ಮುಖವನ್ನು ಸುದ್ದಿ ಪತ್ರಿಕೆಯೊಂದರಲ್ಲಿ ಸುಟ್ಟ ನಾನು ಆತನ ದೇಹವನ್ನು ಬೈಸಿಕಲ್‌ನಲ್ಲಿ ಹೊತ್ತುಕೊಂಡು ತೆರಳಿ ಅಜ್ಞಾತ ಸ್ಥಳವೊಂದರಲ್ಲಿ ಬಿಸಾಡಿದೆ,” ಎಂದಿದ್ದಾನೆ ಕೊಲೆಗಡುಕ.

ಲೋನಿಯ ಅಜ್ಞಾತ ಸ್ಥಳದಲ್ಲಿ ದೇಹ ಕಂಡುಬಂದಿದೆ. ತನಿಖೆ ವೇಳೆ ಕುಮಾರ್‌ನ ದೇಹದ ಎತ್ತರ ಹಾಗೂ ಆ ದೇಹದ ಎತ್ತರದಲ್ಲಿದ್ದ ವ್ಯತ್ಯಾಸಗಳನ್ನು ಪತ್ತೆ ಮಾಡಿದ ಪೊಲೀಸರು, ಆಧಾರ್‌ ಕಾರ್ಡ್‌ನಲ್ಲಿ ಸಿಕ್ಕ ಮಾಹಿತಿ ಆಧರಿಸಿ ದೆಹಲಿಯಲ್ಲಿರುವ ಆತನ ಮನೆಗೆ ಬಂದಿದ್ದಾರೆ. ಈ ವೇಳೆ ತನ್ನನ್ನು ಪ್ರಶ್ನಿಸಿದ ಪೊಲೀಸರಿಗೆ ಗಂಡ ಹೇಳಿ ಕೊಟ್ಟ ಹಾಗೆ ಹೇಳಿದ ಆತನ ಪತ್ನಿಯ ಹೇಳಿಕೆಯಿಂದ ಅನುಮಾನ ಬಂದ ಪೊಲೀಸರು ಇಬ್ಬರನ್ನೂ ಬಂಧಿಸಿ, ರವಿದಾಸ್‌ನನ್ನು ಕೊಲ್ಲಲು ಬಳಸಿದ್ದ ಮಂಚದ ಕಾಲು ಹಾಗೂ ಬೈಸಿಕಲ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...