alex Certify ಮೃಗಾಲಯದಲ್ಲಿರುವ ಪ್ರಾಣಿಗಳಿಗೂ ಕೋವಿಡ್‌ ಲಸಿಕೆ ನೀಡಲು ಮುಂದಾದ ಅಮೆರಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯದಲ್ಲಿರುವ ಪ್ರಾಣಿಗಳಿಗೂ ಕೋವಿಡ್‌ ಲಸಿಕೆ ನೀಡಲು ಮುಂದಾದ ಅಮೆರಿಕಾ

Tigers, Bears, Ferrets Get Covid-19 Shots at Oakland Zoo

ಸ್ಯಾನ್‌ ಫ್ರಾನ್ಸಿಸ್ಕೋ ಬೇ ಏರಿಯಾದ ಓಕ್ಲೆಂಡ್ ಮೃಗಾಲಯವು ತನ್ನಲ್ಲಿರುವ ದೊಡ್ಡ ಬೆಕ್ಕುಗಳು, ಕರಡಿಗಳು ಹಾಗೂ ಫೆರ‍್ರೆಟ್‌ಗಳಿಗೆ ಕೋವಿಡ್ ಲಸಿಕೆಗಳನ್ನು ಹಾಕುತ್ತಿದೆ. ಈ ಮೂಲಕ ತನ್ನಲ್ಲಿರುವ ವನ್ಯಸಂಕುಲವನ್ನು ಸೋಂಕಿನಿಂದ ರಕ್ಷಿಸುವ ಕೆಲಸಕ್ಕೆ ಮೃಗಾಲಯ ಮುಂದಾಗಿದೆ.

ಆಗತಾನೆ ಜನಿಸಿದ್ದ ನವಜಾತ ಶಿಶು ಕೊಂದ ಮಹಿಳೆ ಅರೆಸ್ಟ್

ಹುಲಿಗಳಾದ ಜಿಂಜರ್‌ ಮತ್ತು ಮೋಲಿ ಈ ಮೃಗಾಲಯದಲ್ಲಿ ಲಸಿಕೆ ಪಡೆದ ಮೊದಲ ಪ್ರಾಣಿಗಳಾಗಿವೆ. ಈ ಲಸಿಕೆಗಳನ್ನು ನ್ಯೂಜೆರ್ಸಿಯಲ್ಲಿರುವ ಫಾರ್ಮಾ ಕಂಪನಿ ಜ಼ೋಟಿಸ್ ಅಭಿವೃದ್ಧಿಪಡಿಸಿದೆ. ಈ ಕಂಪನಿಯು ಅಮೆರಿಕದ 27 ರಾಜ್ಯಗಳಲ್ಲಿರುವ 70 ಮೃಗಾಲಯಗಳಲ್ಲಿರುವ 11,000 ಪ್ರಾಣಿಗಳಿಗೆ ಲಸಿಕೆಗಳನ್ನು ವಿತರಿಸುತ್ತಿದೆ.

ಹಾಲು-ತುಳಸಿ ಸೇವನೆ ಮಾಡಿದ್ರೆ ದೂರವಾಗುತ್ತೆ ಈ ರೋಗ

ಪ್ರಾಣಿಗಳಿಗೆ ಯಾವುದೇ ಸೋಂಕು ತಗುಲದೇ ಇದ್ದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಹೀಗೆ ಡೋಸ್‌ಗಳನ್ನು ಕೊಡಲಾಗುತ್ತಿದೆ ಎಂದು ಮೃಗಾಲಯದ ಪಶುವೈದ್ಯಕೀಯ ವಿಭಾಗದ ಉಪಾಧ್ಯಕ್ಷ ಅಲೆಕ್ಸ್ ಹರ್ಮನ್ ತಿಳಿಸಿದ್ದಾರೆ.

ತಮ್ಮ ಡಿಎನ್‌ಎಎನ 98%ರಷ್ಟು ಭಾಗವನ್ನು ಮಾನವರೊಂದಿಗೆ ಹಂಚಿಕೊಂಡಿರುವ ಕೋತಿಗಳ ಜಾತಿಯ ಪ್ರಾಣಿಗಳಿಗೆ ಸ್ಯಾನ್ ಡಿಯೆಗೋ ಮೃಗಾಲಯವು ಇದೇ ಜನವರಿಯಿಂದ ಕೋವಿಡ್ ಲಸಿಕೆಗಳನ್ನು ಕೊಡಲು ಆರಂಭಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...