alex Certify ಜಿಂಕೆ ಸಮೀಪವಿದ್ದರೂ ಬೇಟೆಯಾಡುವಲ್ಲಿ ಹುಲಿ ವಿಫಲ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಕೆ ಸಮೀಪವಿದ್ದರೂ ಬೇಟೆಯಾಡುವಲ್ಲಿ ಹುಲಿ ವಿಫಲ: ವಿಡಿಯೋ ವೈರಲ್​

ಉತ್ತರಾಖಂಡ: ಹುಲಿಗಳು ತಮ್ಮ ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ಬೇಟೆಯಾಡುವಲ್ಲಿ ಇವುಗಳದ್ದು ಎತ್ತಿದ ಕೈಯೇ ಇರಬಹುದು. ಆದರೆ ಕೆಲವೊಮ್ಮೆ ಅವು ಕೂಡ ವಿಫಲವಾಗುತ್ತವೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸಾಕೇತ್ ಬಡೋಲಾ ಅವರು ಹಂಚಿಕೊಂಡ ವಿಡಿಯೋದಲ್ಲಿ ಹುಲಿಯು ಜಿಂಕೆಯನ್ನು ವ್ಯರ್ಥವಾಗಿ ಬೆನ್ನಟ್ಟುತ್ತಿರುವುದನ್ನು ಕಾಣಬಹುದು.

13-ಸೆಕೆಂಡ್‌ಗಳ ವೀಡಿಯೊ ಉಸಿರುಗಟ್ಟಿಸುವಂತೆ ಮಾಡುತ್ತದೆ. ಈ ವಿಡಿಯೋದಲ್ಲಿ ಮೊದಲಿಗೆ, ಹುಲಿ ಜಿಂಕೆಯ ಸಮೀಪದಲ್ಲಿಯೇ ಇರುತ್ತದೆ. ಸುಲಭದಲ್ಲಿ ಅದು ಜಿಂಕೆಯನ್ನು ಬೇಟೆಯಾಡುತ್ತದೆ ಎಂದು ಎನಿಸುತ್ತದೆ.

ಆದರೆ ಹುಲಿಯ ಇರುವಿಕೆಯನ್ನು ಗಮನಿಸಿದ ಜಿಂಕೆ ಶೀಘ್ರದಲ್ಲೇ ವೇಗವನ್ನು ಹೆಚ್ಚಿಸುತ್ತದೆ. ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಜಿಂಕೆಯ ವೇಗಕ್ಕೆ ಹುಲಿ ಓಡಿದರೂ ಬೇಟೆ ಸಿಗುವುದಿಲ್ಲ. ಹುಲಿ ಸುಸ್ತಾಗಿ ಅಲ್ಲಿಯೇ ನಿಲ್ಲುವುದನ್ನು ವಿಡಿಯೋದಲ್ಲಿ ನೋಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...