alex Certify ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ರಕ್ಷಿಸಿಕೊಳ್ಳೋದು ಹೇಗೆ ? ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ರಕ್ಷಿಸಿಕೊಳ್ಳೋದು ಹೇಗೆ ? ವಿಡಿಯೋ ವೈರಲ್​

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​ ನಂದಾ ಅವರು ಟ್ವಿಟರ್‌ನಲ್ಲಿ ಆಗಿದ್ದಾಂಗೆ ಕೆಲವು ಆಸಕ್ತಿದಾಯಕ ವೀಡಿಯೊವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರು ಶೇರ್​ ಮಾಡುವ ವಿಡಿಯೋಗಳು ಹೆಚ್ಚಿನದ್ದಾಗಿ ವನ್ಯಮೃಗಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ಹೇಗೆ ಬದುಕುಳಿಯುತ್ತದೆ, ಅದು ತನ್ನನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತದೆ ಎಂಬುದನ್ನು ನೋಡಬಹುದು. ಚಿಕ್ಕ ವಿಡಿಯೋದಲ್ಲಿ ಇದಕ್ಕೆ ಸ್ಪಷ್ಟವಾದ ಉತ್ತರ ಸಿಗುತ್ತದೆ.

ಇದು 30 ಸೆಕೆಂಡುಗಳ ವಿಡಿಯೋವಾಗಿದೆ. ಈ ವಿಡಿಯೋದಲ್ಲಿ ಹುಲಿ, ಚಿರತೆಯ ಮೇಲೆ ದಾಳಿ ಮಾಡಲು ಸಿದ್ಧವಾಗುತ್ತಿರುವುದನ್ನು ಕಾಣಬಹುದು. ಅದು ಚಿರತೆಯ ಕಡೆಗೆ ಧಾವಿಸಿ ಬಂದಾಗ ಚಿರತೆ ಅಲ್ಲಿರುವ ಮರವನ್ನು ವೇಗದಲ್ಲಿ ಹತ್ತುತ್ತದೆ.

ಆದರೆ ಹುಲಿಗೆ ಅದರಷ್ಟು ವೇಗದಲ್ಲಿ ಹತ್ತಲು ಸಾಧ್ಯವಾಗದೇ ಅರ್ಧಕ್ಕೇ ವಾಪಸಾಗುತ್ತದೆ. ಈ ಕುರಿತು ತಿಳಿಸಿರುವ ಸುಸಂತಾ​ ನಂದಾ ಅವರು, ಹುಲಿಯು ಪ್ರಾಯದಲ್ಲಿ ವೇಗವಾಗಿ ಮರವನ್ನು ಹತ್ತಬಲ್ಲುವು. ಆದರೆ ಅವುಗಳಿಗೆ ಸ್ವಲ್ಪ ವಯಸ್ಸಾದರೆ ದೇಹದ ತೂಕ ಹೆಚ್ಚಾಗಿ ಮರ ಏರುವುದು ಕಷ್ಟವಾಗುತ್ತದೆ. ಇದರಿಂದ ಚಿರತೆಗಳು ಸುಲಭವಾಗಿ ರಕ್ಷಿಸಿಕೊಳ್ಳುತ್ತವೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...