alex Certify ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಪಾಕ್​ ಗಡಿಯತ್ತ ಓಡಿದ ಅಫ್ಘನ್ನರು..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಪಾಕ್​ ಗಡಿಯತ್ತ ಓಡಿದ ಅಫ್ಘನ್ನರು..! ವಿಡಿಯೋ ವೈರಲ್​

ಕಾಬೂಲ್​ ವಿಮಾನ ನಿಲ್ದಾಣದ ಸಾಕಷ್ಟು ಹೃದಯವಿದ್ರಾವಕ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ಬೆನ್ನಲ್ಲೇ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಸ್ಪಿನ್​ ಬೋಲ್ಡಾಕ್​​ ಗಡಿಯಲ್ಲಿ ಇದೇ ರೀತಿಯ ದೃಶ್ಯಾವಳಿಗಳು ಕಾಣುತ್ತಿದೆ.

ತಾಲಿಬಾನ್​ ಆಳ್ವಿಕೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ಅಫ್ಘನ್ನರು ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿರುವ ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ತಾಲಿಬಾನ್​ ಸರ್ವಾಧಿಕಾರದಿಂದ ತಪ್ಪಿಸಿಕೊಳ್ಳಲು ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ಅಫ್ಘನ್ನರು ಸ್ಪಿನ್ ಬೋಲ್ಡಾಕ್ ಗಡಿಯ ಇಕ್ಕಟ್ಟಿನ ಜಾಗದಲ್ಲಿ ಕುಳಿತಿರೋದನ್ನು ಕಾಣಬಹುದಾಗಿದೆ.

ಸ್ಥಳೀಯ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ತಾಲಿಬಾನಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಲ್ಲಿ ಕಾಲ್ತುಳಿತ ಕೂಡ ಸಂಭವಿಸಿದೆ ಎನ್ನಲಾಗಿದೆ.

ಟ್ವಿಟರ್​ ಬಳಕೆದಾರ ಹಾಗೂ ಪತ್ರಕರ್ತ ನಾತಿಕ್​​ ಮಜಿಕ್ಜಾಡಾ ಎಂಬವರು ಈ ವೈರಲ್​ ವಿಡಿಯೋವನ್ನು ಶೇರ್​ ಮಾಡಿದ್ದಾರೆ, ಇದು ಕಾಬೂಲ್​ ವಿಮಾನ ನಿಲ್ದಾಣ ಬಳಿಯ ದೃಶ್ಯವಲ್ಲ, ಸ್ಪಿನ್​ ಬೋಲ್ಡಕ್​ ಗಡಿಯಲ್ಲಿ ಸಾವಿರಕ್ಕೂ ಅಧಿಕ ಜನರು ಪಾಕಿಸ್ತಾನದ ಕಡೆಗೆ ತೆರಳಲು ಬಯಸುತ್ತಿದ್ದಾರೆ. ಕಾಬೂಲ್​ ವಿಮಾನ ನಿಲ್ದಾಣಕ್ಕಿಂತಲೂ ಇಲ್ಲಿನ ಪರಿಸ್ಥಿತಿ ಇನ್ನೂ ದಯನೀಯವಾಗಿದೆ. ಇಲ್ಲಿ ಯಾವುದೇ ಸೇನೆ ಇಲ್ಲದ ಕಾರಣ ಈ ಸನ್ನಿವೇಶವನ್ನು ಮಾಧ್ಯಮಗಳು ಚಿತ್ರೀಕರಿಸುತ್ತಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.

ಈ ನಡುವೆ ಪಾಕಿಸ್ತಾನವು ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ.

— Natiq Malikzada (@natiqmalikzada) August 25, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...