alex Certify ಕಾಬೂಲ್ ತೊರೆಯುವ ಮುನ್ನ ಅಮೆರಿಕಾ ಮಾಡಿದೆ ಒಂದೊಳ್ಳೆ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಬೂಲ್ ತೊರೆಯುವ ಮುನ್ನ ಅಮೆರಿಕಾ ಮಾಡಿದೆ ಒಂದೊಳ್ಳೆ ಕೆಲಸ

20 ವರ್ಷಗಳ ಸುದೀರ್ಘ ಹಾಗೂ ದುಬಾರಿ ಸಮರದಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗದೆಯೇ, ಕೊನೆಗೂ ಅಫಘಾನಿಸ್ತಾನವನ್ನು ತಾಲಿಬಾನ್ ಉಗ್ರರ ಕೈನಲ್ಲಿಯೇ ಇಟ್ಟು ಹಿಂದಿರುಗಿದ ಅಮೆರಿಕ ಸೇನಾಪಡೆಯು ಸೋಮವಾರದಂದು ತವರಿಗೆ ಮರಳುವಾಗ 73 ಯುದ್ಧ ವಿಮಾನಗಳನ್ನು ಕಾಬೂಲ್ ಏರ್‍ಪೋರ್ಟ್‍ನಲ್ಲಿ ನಿಷ್ಕ್ರಿಯಗೊಳಿಸಿದೆ.

ಅಮೆರಿಕ ಪಡೆಗಳು ಜಾಗ ಖಾಲಿ ಮಾಡಿದ ಬಳಿಕ ಏರ್‍ಪೋರ್ಟ್‍ಗೆ ಬಂದ ತಾಲಿಬಾನ್ ಉಗ್ರರು ಈ ವಿಮಾನಗಳಲ್ಲಿ ಕೂತು, ಮಕ್ಕಳಂತೆ ಆಟವಾಡಿದ್ದಾರೆ. ಅಯ್ಯೋ, ಉಗ್ರರು ಹಾರಿಸಿ, ದಾಳಿ ಮಾಡಿದರೆ ಹೇಗೆ  ? ಎಂದು ಆತಂಕಗೊಳ್ಳಬೇಡಿರಿ.

ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಲಾಭ

ಅಮೆರಿಕ ಸೇನೆಯ ಮುಖ್ಯಸ್ಥ ಜನರಲ್ ಕೆನ್ನಿತ್ ಮ್ಯಾಕೆನ್ಜಿ ಪ್ರಕಾರ, ಅವರು ಈ ಯುದ್ಧ ವಿಮಾನಗಳು ಸ್ಥಗಿತಗೊಳಿಸಿರುವುದು ಮತ್ತು ಕೆಲವು ಶಸ್ತ್ರಾಸ್ತ್ರಗಳನ್ನು ಎಸೆದು ಹೋಗಿರುವುದು ಅವುಗಳು ಇನ್ನು ಎಂದಿಗೂ ಉಪಯೋಗಕ್ಕೆ ಬರಲ್ಲ ಎಂದು ತಿಳಿದ ಮೇಲೆಯೇ ಅಂತೆ. ವಿಮಾನಗಳು ಹಾರಲು ಸಾಧ್ಯವೇ ಇಲ್ಲ, ಅದರಲ್ಲಿನ ಪ್ರಮುಖ ಭಾಗಗಳೇ ಇಲ್ಲ. ಇನ್ನು ಗನ್‍ಗಳು, ಪಿಸ್ತೂಲ್‍ಗಳು ಪೂರ್ಣ ಹಾಳಾಗಿ ಹೋಗಿವೆ. ಅಮೆರಿಕಕ್ಕೆ ಹಾಳಾದ ವಸ್ತುಗಳನ್ನು ಒಯ್ಯುವ ಬದಲು ಎಸೆದು ಹೋಗುತ್ತಿದ್ದೇವೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...